Posts

ಲಯನ್ಸ್ ಕ್ಲಬ್ ಬೆಳ್ತಂಗಡಿಯ ನೂತನ ಅಧ್ಯಕ್ಷರಾಗಿ ಹೇಮಂತ ರಾವ್ ಅವರಿಗೆ ಅಧಿಕಾರ ಪದಪ್ರದಾನ

1 min read

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾಗಿದ್ದ ರಾಜೀವ ಡಿ ಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೇಮಂತ ರಾವ್  ಯರ್ಡೂರು ಅವರ ಪದಗ್ರಹಣ ಕಾರ್ಯಕ್ರಮ ಮಂಗಳವಾರ  ಲಯನ್ಸ್ ಭವನದಲ್ಲಿ ನಡೆಯಿತು.

ಪೂರ್ವಾರ್ಧದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಪೂರ್ವಾಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ವಹಿಸಿದ್ದರು.

ಲಯನ್ ಪ್ರಾಂತ್ಯಾಧ್ಯಕ್ಷ ಕೆ. ಧರಣೇಂದ್ರ ಜೈನ್ ನೂತನ ಅಧ್ಯಕ್ಷರಿಗೆ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಬೋಧಿಸಿದರು.

ಸಮಾರಂಭದಲ್ಲಿ ರಾಜು ಶೆಟ್ಟಿ, ನಿತ್ಯಾನಂದ ನಾವರ, ಮಂಜುನಾಥ ಜಿ, ಜಯರಾಮ ಭಂಡಾರಿ, ಲಕ್ಷ್ಮಣ ಮಾಸ್ಟರ್, ಸುರೇಶ್ ಶೆಟ್ಟಿ ಲಾಯಿಲ, ದೇವಿಪ್ರಸಾದ್, ರಘುರಾಮ ಶೆಟ್ಟಿ, ಸುಶೀಲಾ ಹೆಗ್ಡೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಧತ್ತಾತ್ರೇಯ ಗೊಲ್ಲ, ವಿನ್ಸೆಂಟ್ ಟಿ ಡಿಸೋಜಾ, ಡಾ. ದೇವಿಪ್ರಸಾದ್ ಬೊಳ್ಮ, ಬಿ ತುಕಾರಾಮ, ಕಿಟ್ ಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರನ್ನು ಕೆ ಕೃಷ್ಣ ಆಚಾರ್ ಸಭೆಗೆ ಪರಿಚಯಿಸಿದರು. ವಲಯಾಧ್ಯಕ್ಷ ವಸಂತ ಶೆಟ್ಟಿ ಸ್ವಾಗತಿಸಿದರು. ಸುಭಾಷಿಣಿ ಪ್ರಾರ್ಥನೆ ಹಾಡಿದರು. ರಾಮಕೃಷ್ಣ ಗೌಡ ಧ್ವಜವಂದನೆ ಸಲ್ಲಿಸಿದರು. ರಘುರಾಮ ಗಾಂಭೀರ ನೀತಿಸಂಹಿತೆ ವಾಚಿಸಿದರು.

ಕಾರ್ಯದರ್ಶಿ ಅನಂತಕೃಷ್ಣ ವಂದನಾರ್ಪಣೆಗೈದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment