Posts

ಕೃಷಿಕರ ಅಭ್ಯುದಯಕ್ಕಾಗಿ 33.72 ಕೋಟಿ ರೂ.ವೆಚ್ಚದ 538 ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ಶಿಲಾನ್ಯಾಸ

1 min read

ಬೆಳ್ತಂಗಡಿ; ಕೃಷಿಕರ ಅಭ್ಯುದಯಕ್ಕಾಗಿ  ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಅನಿಯಮಿತವಾಗಿ ವಿದ್ಯುತ್ ಪೂರೈಸಲು ರೂ .33,72 ಕೋಟಿ ವೆಚ್ಚದಲ್ಲಿ ಹೆಚ್ಚುವರಿಯಾಗಿ 538 ವಿದ್ಯುತ್ ಪರಿವರ್ತಕಗಳನ್ನು ಕಾಮಗಾರಿಯ ಶಿಲಾನ್ಯಾಸ ಸಮಾರಂಭ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಶನಿವಾರ ಜರುಗಿತು.

ಶಿಲಾನ್ಯಾಸವನ್ನು ಕರ್ನಾಟಕ ಸರಕಾರದ ಇಂಧನ ಸಚಿವರು, ಕನ್ನಡ ಸಂಸ್ಕೃತಿ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೆರವೇರಿಸಿದರು. ಶಾಸಕ ಹರೀಶ್ ಪೂಂಜ ಪ್ರಸ್ತಾವನೆಗೈದರು. ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಕ್ಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಕೃಷ್ತ ಬಂಟ್ವಾಳ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮೆಸ್ಕಾಂನ ತಾಂತ್ರಿಕ ಇಂಜಿನಿಯರ್ ಬಿ ಪದ್ಮಾವತಿ, ಮುಖ್ಯ ಇಂಜಿನಿಯರ್ ಪುಷ್ಪಾ, ಅಧೀಕ್ಷಕ‌ ಇಂಜಿನಿಯರ್ ಕೃಷ್ಣರಾಜ್, ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್ ಇವರು ಉಪಸ್ಥಿತರಿದ್ದರು.

ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಬಂಟ್ವಾಳ ವಿಭಾಗ ರಾಮಚಂದ್ರ ಎಂ  ಸ್ವಾಗತಿಸಿದರು.

ಲೀಲಾವತಿ ಮೆಸ್ಕಾಂ ಮಡಂತ್ಯಾರ್ ಪ್ರಾರ್ಥನೆ ಹಾಡಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಬೆಳ್ತಂಗಡಿ ಸಿ.ಎಚ್ ಶಿವಶಂಕರ್ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment