Posts

ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಸಾದಾತ್ ತಂಙಳ್ ಆಸರೆ ಅಗಲಿದ ನೇತಾರರ ಕಬರ್ ಸಂದರ್ಶನ

1 min read

ಬೆಳ್ತಂಗಡಿ: ಇತ್ತೀಚೆಗೆ ನಮ್ಮನ್ನಗಲಿದ ಸಾಂಘಿಕ ವಿದ್ವಾಂಸರ ಹಾಗೂ ಕಾರ್ಯಕರ್ತರ ದಫನ ಭೂಮಿ ಸಂದರ್ಶಿಸಿದ ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಅವರು ಕುಟುಂಬಕ್ಕೆ ಆರ್ಥಿಕ ಸಹಕಾರವನ್ನೂ ನೀಡಿದರು.

ಅಕಾಲಿಕವಾಗಿ ನಮ್ಮನ್ನಗಲಿದ ಮರ್ಹೂಂ ಸಯ್ಯಿದ್ ಹಾರೂನ್ ತಂಙಳ್ ಬದ್ರಾವತಿ ಮತ್ತು ದಾಂಡೇಲಿ ಸಯ್ಯಿದ್ ಕುಂಞಿಕೋಯ ಜಮಲುಲ್ಲೈಲಿ ತಂಙಳ್ ಅವರ ಕಬರ್ ಸಂದರ್ಶನ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಹಾರೂನ್ ತಂಙಳ್ ಕುಟುಂಬಕ್ಕೆ ಮತ್ತು ಇತ್ತೀಚೆಗೆ ಅಗಲಿದ ಎಸ್‌ವೈಎಸ್ ಬಂಗ್ಲೆಗುಡ್ಡೆ ನಾಯಕ ಶರೀಫ್ ಕುಟುಂಬಕ್ಕೆ ಆರ್ಥಿಕ ಸಹಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸಹಾಯ್ ಸರ್ಕಲ್ ಡೈರೆಕ್ಟರ್‌ಗಳಾದ ಅಬ್ದುರ್ರಶೀದ್ ಬಲಿಪಾಯ ಮತ್ತು ಹಂಝ ಮದನಿ ಗುರುವಾಯನಕೆರೆ, ಉಜಿರೆ ಟೀಂ ಅಮೀರ್ ಕಾಸಿಮ್ ಮುಸ್ಲಿಯಾರ್ ಮಾಚಾರು, ಅಡ್ವಕೇಟ್ ಅಸ್ಸಯ್ಯಿದ್ ಮುಈನುದ್ದೀನ್ ಸಖಾಫಿ ಮಂಜೇಶ್ವರ, ಅಸ್ಸಯ್ಯಿದ್ ಜಾಫರ್ ತಂಙಳ್, ಅಸ್ಸಯ್ಯಿದ್ ಸಾಬಿತ್ ತಂಙಳ್, ಎಸ್ಸೆಸ್ಸೆಫ್ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಸಖಾಫಿ ಭದ್ರಾವತಿ, ಬಂಗ್ಲೆಗುಡ್ಡೆ ಸಂಸ್ಥೆಯ ಪ್ರಾಂಶುಪಾಲ ಅಹ್ಮದ್ ಶರೀಫ್ ಸ‌ಅದಿ ಕಿಲ್ಲೂರು ಮೊದಲಾದವರು ಭಾಗಿಯಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment