Posts

ಸೆ.15 ರಂದು ರೋಟರಿ ಸಹಯೋಗದೊಂದಿಗೆ ಇಂಜಿನಿಯರ್ಸ್ ಡೇ

1 min read


ಬೆಳ್ತಂಗಡಿ; ಎಸಿಸಿಇ(ಐ) ಬೆಳ್ತಂಗಡಿ ಸೆಂಟರ್ ಒಂದು ಅಖಿಲ ಭಾರತ ಸಿವಿಲ್ ಇಂಜಿನಿಯರುಗಳ ಒಕ್ಕೂಟದ ಒಂದು ಅಂಗ ಸಂಸ್ಥೆಯಾಗಿದ್ದು ಕಳೆದ ಎಪ್ರಿಲ್ ನಲ್ಲಿ ಉದ್ಘಾಟನೆಗೊಂಡಿರುತ್ತದೆ. ಪ್ರಸ್ತುತ ಈ ಸೆಂಟರ್ ನಲ್ಲಿ 133 ಸಕ್ರಿಯ ಸಿವಿಲ್ ಇಂಜಿನಿಯರ್ ಸದಸ್ಯರು ಇರುತ್ತಾರೆ. 

ಈ‌ ಬಾರಿ ರೋಟರಿ ಸಹಯೋಗದೊಂದಿಗೆ ಸೆ.15 ರಂದು ಉಜಿರೆಯಲ್ಲಿ  ಇಂಜಿನಿಯರ್ಸ್ ಡೇ ಕಾರ್ಯಕ್ರಮ ವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ಪ್ರಸಾದ್ ವಿವರಿಸಿದರು.

ನಗರದ ವಾರ್ತಾಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಇದರ ಅಂಗವಾಗಿ ಎಸಿಸಿಇ (ಐ) ಬೆಳ್ತಂಗಡಿ ಸೆಂಟರ್ ವತಿಯಿಂದ ಸರ್.ಎಮ್.ವಿಶ್ವೇಶ್ವರಯ್ಯ ಅವರ 162 ನೇ ಜಯಂತಿ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಬೃಹತ್ ವಾಹನ ಜಾಥಾವನ್ನು ಹಳೇಕೋಟೆ ಬೆಳ್ತಂಗಡಿಯಿಂದ ಉಜಿರೆವರೆಗೆ ಹಮ್ಮಿಕೊಳ್ಳಲಾಗಿದೆ. ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಜೆ 5 ರಿಂದ ನಮ್ಮ ಸೆಂಟರಿನ ಸದಸ್ಯರಿಗೆ ತಾಂತ್ರಿಕ ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ. ಈ ಕಾರ್ಯಾಗಾರವನ್ನು ಮಂಗಳೂರಿನ ಖ್ಯಾತ ಇಂಜಿನಿಯ‌ ಅನಿರುದ್ಧ ರಾವ್ ಅವರು ನಡೆಸಿಕೊಡಲಿದ್ದಾರೆ.

ಸಂಜೆ 7 ರಿಂದ ರೋಟರಿ ಕ್ಲಬ್ ನ ಸಹಭಾಗಿತ್ವದಲ್ಲಿ ನಮ್ಮ ತಾಲೂಕಿನ ಇಬ್ಬರು ಹಿರಿಯ ಇಂಜಿನಿಯರುಗಳಾದ ಇಂಜಿನಿಯರ್‌ ನಾರಾಯಣ ಭಟ್ ಮತ್ತು ಇಂಜಿನಿಯರ್ ಸೀತಾರಾಮ ಶೆಟ್ಟಿ ಇವರನ್ನು ಗೌರವಿಸಲಾಗುವುದು.ನಂತರ ಮನೋರಂಜನಾ ಕಾರ್ಯಕ್ರಮವನ್ನು ಪುತ್ತೂರಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಮುರಳಿ ಸಹೋದರರ ಡಾನ್ಸ್ ಕ್ರೂ ಹಾಗೂ ವಿದುಷಿ ಪೂಜಾ ಪ್ರಶಾಂತ್ ಮತ್ತು ವಿದುಷಿ ಪ್ರತೀಕ್ಷ ಇವರು ಭರತ ನಾಟ್ಯ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಮ್ಮ ಅಸೋಸಿಯೇಷನ್ ಸೆಂಟರ್ ವ್ಯಾಪ್ತಿಗೊಳಪಟ್ಟ ಕಡಬ, ನೆಲ್ಯಾಡಿ, ಕೊಕ್ಕಡ, ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಬಂಟ್ವಾಳ,‌ ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಳ್ತಂಗಡಿ ಇಲ್ಲಿನ ಎಲ್ಲಾ ಸಿವಿಲ್ ಇಂಜಿನಿಯರುಗಳು, ರೋಟರಿ ಮಿತ್ರರು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಕಾರ್ಯದರ್ಶಿ ರಕ್ಷಾ ರಾಗ್ನೇಶ್, ಇ‌ಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಕೋಶಾಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು.

------

ವರದಿ: ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment