Posts

ಲಾರಿ- ಬೈಕ್ ಅಪಘಾತ; ತೆಕ್ಕಾರು ಪಂಚಾಯತ್ ಸದಸ್ಯ ಹಕೀಂ ಅವರ ಸಹೋದರಿ ದಾರುಣವಾಗಿ ಸಾವು

0 min read

ಬೆಳ್ತಂಗಡಿ: ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಬೈಕ್ ನಡುವೆ ಶುಕ್ರವಾರ ಮಧ್ಯಾಹ್ನ ವೇಳೆ ನಡೆದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಸಹ ಸವಾರೆ ಬೆಳ್ತಂಗಡಿ ತಾಲೂಕಿನ ಸರಳಿಕಟ್ಟೆ ನಿವಾಸಿ ಸೆಕೀನಾ ಅವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ‌ ಆದಿತ್ಯ‌ ಹೊಟೇಲ್ ಬಳಿ ಘಟನೆ ನಡೆದಿದೆ.

ಸರಳಿಕಟ್ಟೆ ನಿವಾಸಿ ರಫೀಕ್ ಎಂಬವರ ಪತ್ನಿ ಸಕೀನಾ ತೆಕ್ಕಾರು ಗ್ರಾ.ಪಂ ಸದಸ್ಯ, ತನಲ್ ಈವೆಂಟ್ ಮೆನೇಜ್‌ಮೆಂಟ್ ಸಂಸ್ಥೆಯ ಮಾಲಕ ಹಕೀಮ್ ಅವರ ಸಹೋದರಿಯಾಗಿದ್ದಾರೆ.

ಬಿ.ಸಿ.ರೋಡ್ ನಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಬೈಕ್‌ ಮಧ್ಯೆ ಡಿಕ್ಕಿ ನಡೆದಿದೆ‌.‌ಈ ವೇಳೆ  ಸವಾರ, ಸಕೀನಾರ ಪತಿ ರಫೀಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನೆ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment