ಬೆಳ್ತಂಗಡಿ; ಮುಂಡಾಜೆ ಗ್ರಾಮದ ಶಾರದಾನಗರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತಾ.ಪಂ ಮುಂಡಾಜೆ ಕ್ಷೇತ್ರದ ಸದಸ್ಯೆ ಲೀಲಾವತಿ ಅವರು ಒದಗಿಸಿಕೊಟ್ಟ 2 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ರಚಿಸಿದ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಬುಧವಾರ ನಡೆಯಿತು.
ತಾ.ಪಂ ಉಪಾಧ್ಯಕ್ಷೆ ವೇದಾವತಿ ಮತ್ತು ಸದಸ್ಯೆ ಲೀಲಾವತಿ ಅವರು ರಸ್ತೆಯನ್ನು ಉದ್ಘಾಟನೆ ನಡೆಸಿದರು.
ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಅಡೂರು ಗೋಪಾಲಕೃಷ್ಣ ರಾವ್, ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ ಕಾನರ್ಪ, ಅರ್ಚಕ ರಾಜಶೇಖರ ಭಟ್, ಕಾರ್ಯದರ್ಶಿ ಶೀನಪ್ಪ ಗೌಡ, ಕೋಶಾಧಿಕಾರಿ ಚೆನ್ನಕೇಶವ ಅರಸಮಜಲು, ಗ್ರಾ.ಪಂ ಸದಸ್ಯರಾದ ಅಗರಿ ರಾಮಣ್ಣ ಶೆಟ್ಟಿ, ಎಂ ವಿಶ್ವನಾಥ ಶೆಟ್ಟಿ, ಯಶೋಧಾ, ರಂಜಿನಿ, ದಿಶಾ ಪಟವರ್ಧನ್, ಗಣೇಶ್ ಬಂಗೇರ, ನಿವೃತ ಅರಣ್ಯ ಅಧಿಕಾರಿ ಎಂ.ಎಸ್ ವರ್ಮ, ಊರ ಪ್ರಮುಖರಾದ ನಾರಾಯಣ ಪೂಜಾರಿ ಕೂಳೂರು, ನಾರಾಯಣ ಗೌಡ ಕೊಳಂಬೆ, ಬಾಬು ಪೂಜಾರಿ ಕೂಳೂರು, ರವಿಚಂದ್ರ ಭಂಡಾರಿ, ಡಿ.ಶಿವಯ್ಯ ಗೌಡ, ರಮೇಶ ಆಚಾರ್ಯ, ಜಯರಾಂ, ಕೆ ವೆಂಕಪ್ಪ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.