ಬೆಳ್ತಂಗಡಿ;ಸೋಲೂರಿನ ಪೀಠಾಧಿಪತಿಗಳಾಗಿ ನಿಯುಕ್ತರಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳ ಪಟ್ಟಾಭಿಷೇಕದ ಪ್ರಯುಕ್ತ ಬೆಳ್ತಂಗಡಿ ಬಿಲ್ಲವ ಸಂಘದಲ್ಲಿ ಜನವರಿ 20ರಂದು ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಣೆ ಮತ್ತು ಸಮಾಲೋಚನಾ ಸಭೆಯು ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಇವರ ಅಧ್ಯಕ್ಷತೆಯಲ್ಲಿ ವೇಣೂರಿನ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಮಾತನಾಡಿ, ಜನವರಿ 20ರಂದು ಬೆಳ್ತಂಗಡಿ ಬಿಲ್ಲವ ಸಂಘದಲ್ಲಿ ವಿಖ್ಯಾತಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸೋಲೂರು ಪೀಠಾರೋಹಣದ ಗುರುಭ್ಯೋ ನಮಃ ಕಾರ್ಯಕ್ರಮಕ್ಕೆ ಸಮಾಜ ಬಂಧುಗಳನ್ನು ಆಹ್ವಾನಿಸಿದರು. ಸೋಲೂರಿನ ಪೆ.2ರ ಕಾರ್ಯಕ್ರಮಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು. ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು, ನಿರ್ದೇಶಕರಾದ ಸೂರ್ಯನಾರಾಯಣ ಡಿ.ಕೆ,ರಮೇಶ್ ಪಡ್ಧಾಯಿಮಜಲು, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಕೋಟ್ಯಾನ್ ವೇಣೂರು ಸಂಘದ ಗೌರವಾಧ್ಯಕ್ಷ ಪೂವಪ್ಪ ಪೂಜಾರಿ, ನವೀನ್ ಪಚ್ಚೇರಿ, ಸತೀಶ್ ಪಿ.ಎನ್ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕರಾದ ರಮೇಶ್ ಪಡ್ದಾಯಿಮಜಲು ಸ್ವಾಗತಿಸಿ, ವೇಣೂರು ಸಂಘದ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ನಿರೂಪಿಸಿ, ಕೋಶಾಧಿಕಾರಿ ಯೋಗೀಶ್ ಬಿಕ್ರೋಟ್ಟು ವಂದಿಸಿದರು.