Posts

ಸರಕಾರಕ್ಕೆ ತಾಕದ್ದಿದ್ದರೆ ಮೇಕೆದಾಟು ಹೋರಾಟಗಾರರನ್ನು ಬಂಧಿಸಲಿ; ವಸಂತ ಬಂಗೇರ ||ಬಿಜೆಪಿಯಿಂದ ಲಾಕ್‌ಡೌನ್ ಹುನ್ನಾರ ಆರೋಪಿಸಿ ಬೆಳ್ತಂಗಡಿಗೆಯಲ್ಲಿ ಸರ್ವ ಪಕ್ಷದಿಂದ ಪ್ರತಿಭಟನೆ

1 min read

ಬೆಳ್ತಂಗಡಿ; ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುವ ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಹುನ್ನಾರದಿಂದ ಆಡಳಿತರೂಢ ಬಿಜೆಪಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿಗೆ ತೋರಿಸುತ್ತಿದೆ‌. ಆ ಮೂಲಕ ಪಾದಯಾತ್ರೆ ನಡೆಸಿದ ನಾಯಕರನ್ನು ಬಂಧಿಸುವ ಸಂಚು ಮಾಡುತ್ತಿದ್ದು, ಕಾಂಗ್ರೆಸ್ ನಾಯಕರು ಜನತೆಯ ನ್ಯಾಯಕ್ಕೋಸ್ಕರ ಜೈಲಿಗೆ ಹೋಗಲು  

 ಸಿದ್ಧವಾಗಿದ್ದಾರೆ. ಸರಕಾರಕ್ಕೆ ತಾಕದ್ದಿದ್ದರೆ ಮೇಕೆದಾಟು ಹೋರಾಟಗಾರರನ್ನು ಬಂಧಿಸಲಿ ಎಂದು ಮಾಜಿ ಶಾಸಕ ವಸಂತ ಬಂಗೇರ ಸವಾಲೆಸೆದರು.


ಬಿಜೆಪಿ‌ ಸರಕಾರದ ಜನ‌ವಿರೋಧಿ ನಿರ್ಭಂಧ ನಡೆಯ ವಿರುದ್ದ, ವಾರಾಂತ್ಯ ಕರ್ಪ್ಯೂ, ಲಾಕ್ ಡೌನ್ ಹುನ್ನಾರದ ವಿರುದ್ದ , ಕೊರೋನಾ ಹೆಸರಲ್ಲಿ ಜನರ ಬದುಕನ್ನ ನಾಶ ಮಾಡುವ ಸರಕಾರದ ದೋರಣೆ ಖಂಡಿಸಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ, ಕಾರ್ಮಿಕ ಸಂಘಟನೆಗಳು, ಕಮ್ಯೂನಿಸ್ಟ್ , ಜೆಡಿಎಸ್ ರಾಜಕೀಯ ಪಕ್ಷಗಳು, 

ರಾಜ್ಯ ರೈತಸಂಘ(ಹಸಿರು  ಸೇನೆ) ಹಾಗೂ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ 

ಬೆಳ್ತಂಗಡಿ ಮಿನಿವಿಧಾನ ಸೌದ ಎದುರು ಬುಧವಾರ ನಡೆದ ಐಖ್ಯ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಕೋವಿಡ್ ನಿಂದ ಸಾವನ್ನಪ್ಪಿದವರಿಗೆ  ಸರಕಾರ ಪರಿಹಾರ ಕೊಡುವುದಾಗಿ ಹೇಳಿದ್ದು ಹಣ ಬಂದಿಲ್ಲ. 

ದೇಶದಲ್ಲಿ ಲಸಿಕೆಯಿಂದಾಗುಯೇ ಅನೇಕ ಮಂದಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಅವರಿಗೆ ಪರಿಹಾರ ಕೊಟ್ಟಿದ್ದೀರಾ. ಪುದುವೆಟ್ಟು ಗ್ರಾಮದ ಕೃಷಿಕ ಕುಕ್ಕ ಗೌಡ ಅವರು ಲಸಿಕೆ ಪಡೆದ ನಂತರವೇ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು.

ಈ‌ ಸರಕಾರದಿಂದ ಕಳೆದ 4 ವರ್ಷಗಳಿಂದ ಬಡವರಿ ಒಂದೇ ಒಂದು ಮನೆ ಮಂಜೂರಾಗಿಲ್ಲ‌ ನಾನು ಶಾಸಕನಾಗಿದ್ದಾಗ 2 ಸಾವಿರ ಮನೆ ಮಂಜೂರು ಮಾಡಿದ್ದೂ ಮಾತ್ರವಲ್ಲದೆ 500 ಮನೆಗಳಿಗೆ  ಹಣ ಮಂಜೂರು ಮಾಡಿಸಿದ್ದೆ ಎಂದರು.‌

ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘ ಹಸಿರುಸೇನೆತ 

ಸುರೇಶ್ ಭಟ್ ಕೊಜಂಬೆ, ಕಾರ್ಮಿಕ ಹೋರಾಟಗಾರ ಬಿ.ಎಂ ಭಟ್, ಉಭಯ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ,ಜೆಸಿಎಸ್ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಮಾತನಾಡಿದರು.

ಸಭೆಯಲ್ಲಿ ಮುಖಂಡರಾದ, ಎ.ಸಿ ಮಾಥ್ಯೂ, ನಮಿತಾ ಪೂಜಾರಿ, ಪ್ರವೀಣ್ ಗೌಡ, ಉಷಾ ಶರತ್, ಮಂಜುನಾಥ ಲಾಯಿಲ,

ವಿನ್ಸೆಂಟ್ ಡಿಸೋಜ, ವಿನುಷಾ ಪ್ರಕಾಶ್, ಖಾಲಿದ್ ಕಕ್ಕೇನ, ಅಬ್ಬಾಸ್ ಬಟ್ಲಡ್ಕ,  ಲಕ್ಷ್ಮಣ ಗೌಡ ಬಂಗಾಡಿ, ನಾಮದೇವ ರಾವ್ ಮುಂಡಾಜೆ, ಸಂದೀಪ್ ನೀರಲ್ಕೆ, ಕೇಶವ ಪಿ ಗೌಡ ಬೆಳಾಲು, ಬಿ.ಕೆ ವಸಂತ, ಅಶ್ವಥ್ ರಾಜ್, ವಂದನಾ ಭಂಡಾರಿ, ವಸಂತಿ ಸಿ ಪೂಜಾರಿ, ನೇಮಿರಾಜ ಗೌಡ, ಜಗದೀಶ್ ಡಿ, ಜನಾರ್ದನ, ಮೆಹಬೂಬ್, ದಿನೇಶ್ ಕೋಟ್ಯಾನ್, ದಯಾನಂದ ಬೆಳಾಲು ರೋಯಿ ಜೋಸೆಫ್ ಪುದುವೆಟ್ಟು, ಇಸ್ಮಾಯಿಲ್ ಪೆರಿಂಜೆ, ನೆಬಿಸಾ ಮೊದಲಾದವರು ಭಾಗವಹಿಸಿದ್ದರು.

ಬಿ ಅಶ್ರಫ್ ನೆರಿಯ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment