ಬೆಳ್ತಂಗಡಿ; ನಮ್ಮ ತುಳುನಾಡಿನಲ್ಲಿ ದೈವಾರಾಧನೆ, ಭೂತಾರಾಧನೆಗಳಿಗೆ ಮಹತ್ವದ ಸ್ಥಾನವಿದ್ದು ಇಲ್ಲಿ ನಾಗಬನ, ಗುಡಿ, ಕಟ್ಟೆ , ದೈವಸ್ಥಾನಗಳು ಪವಿತ್ರವೆನಿಸಿ ತುಳುವರಿಂದ ವಿಶಿಷ್ಟವಾಗಿ ಆರಾಧಿಸಲ್ಪಡುತ್ತವೆ. ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಕೊರಗಜ್ಜ ದೈವದ ಭಕ್ತಿಪ್ರಧಾನವಾದ ಆರಾದನೆಯನ್ನು ಭಕ್ತಿಯ ಕಾರಣಕ್ಕಾದರೂ ಅದನ್ನು ವಾಟ್ಸ್ ಆಪ್ ನಲ್ಲಿ, ಸ್ಟೇಟಸ್ ನಲ್ಲಿ ಹಾಕುವುದೂ ಆಕ್ಷೇಪಾರ್ಹ. ಅವುಗಳ ಬಗೆಗಿನ ಭಕ್ತಿ ಮತ್ತು ಆರಾಧನೆ ಹೃದಯದಲ್ಲಿ ಇರಬೇಕು ಮತ್ತು ದೈವದ ಕೊಡಿಯಡಿಯಲ್ಲೇ ಇರಬೇಕಾದುದನ್ನು ಎಲ್ಲರೂ ಗಮನಿಸಬೇಕಾಗಿದೆ ಎಂದು ಬೆಳ್ತಂಗಡಿ ತಾಲೂಕಿನ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ ಮತ್ತು ಜಿಲ್ಲಾ ಸಂಘದ ಸಂಚಾಲಕ ಸೇಸಪ್ಪ ಅಳದಂಗಡಿ ತಿಳಿಸಿದ್ದಾರೆ.
ಬೆಳ್ತಂಗಡಿ ನಗರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ನಮ್ಮ ತುಳುನಾಡಿನ ಧೈವಾರಾಧನೆ ಜಾಗತಿಕ ಮಟ್ಟದಲ್ಲೂ ವಿಶೇಷ ಸಾಂಸ್ಕೃತಿಕ ಗೌರವಕ್ಕೆ ಪಾತ್ರವಾಗಿದೆ.ತುಳುವರು ಸಾವಿರಾರು ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ತುಳುನಾಡಿನಲ್ಲಿ ನೂರಾರು ಕಾರಣಿಕ ಧೈವಗಳು ಆರಾಧಿಸಲ್ಪಡುತ್ತಿದ್ದು, ಸ್ವಾಮಿ ಕೊರಗಜ್ಜನ ಆರಾಧನೆಯು ಧೈವಾರಾಧನೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
ಇತ್ತೀಚೆಗೆ ವಿಟ್ಲ ಸಮೀಪದ ಮುಸ್ಲಿಂ ಕುಟುಂಬದ ಮದುವೆ ಸಮಾರಂಭದಲ್ಲಿ ಕೊರಗಜ್ಜನ ಹೋಲುವ ವೇಷ ಧರಿಸಿ ವ್ಯಂಗ್ಯ ಮಾಡಿದ ಘಟನೆ ನಡೆದಿದ್ದು ಇದರಿಂದ ನಾಡಿ ಕೊರಗಜ್ಜ ಆರಾಧಕರ ಭಾವನೆಗೆ ಘಾಸಿಯಾಗಿದೆ. ಕೊರಗಜ್ಜನಿಗೆ ಅವಮಾನಿಸಿದ ಘಟನೆಯನ್ನು ನಮ್ಮ ನಲಿಕೆಯವರ ಸಮಾಜ ಸೇವಾ ಸಂಘವು ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಅವರ ಸಮುದಾಯದ ಮುಖಂಡರೂ ಖಂಡಿಸಿದ್ದಾರೆ. ಕೃತ್ಯ ಎಸಗಿದವರೂ ಕ್ಷಮೆ ಕೇಳಿದ್ದಾರೆ. ಅವರ ಮೇಲೆ ಕೇಸು ಕೂಡ ಆಗಿದ್ದು, ಅವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇವೆ. ಪತ್ಯೇಕ ದೂರು ನೀಡುವ ಬಗ್ಗೆ ಆಲೋಚಿಸಿಲ್ಲ ಎಂದರು.
ಕೊರಗಜ್ಜ ಕಟ್ಟೆ, ಧೈವಸ್ಥಾನಗಳನ್ನು ಅಪವಿತ್ರಗೊಳಿಸುವ ಅವಮಾನಿಸುವ, ವ್ಯಂಗ್ಯ ಮಾಡುವ ಧೈವ ವಿರೋಧಿ ಕೃತ್ಯಗಳು ಸರಣಿಯಾಗಿ ಬೆಳಕಿಗೆ ಬರುತ್ತಿರುವುದು ಧೈವಭಕ್ತರಲ್ಲಿ ನೋವನ್ನುಂಟು ಮಾಡುತ್ತಿದೆ.
ಒಂದೆಡೆ ಕಿಡಿಗೇಡಿಗಳು ಕೊರಗಜ್ಜ ಧೈವಕಟ್ಟೆಗಳಿಗೆ, ಧೈವಸ್ಥಾನಗಳಿಗೆ ಹಾನಿ, ಅಪವಿತ್ರವೆಸಗಿ ಧೈವಾರಾಧಕರನ್ನು ಕೆರಳಿಸುತ್ತಿದ್ದು ಇನ್ನೊಂದೆಡೆ ಮತಾಂಧರು ಉದ್ದೇಶಪೂರ್ವಕವಾಗಿ ಕೊರಗಜ್ಜನಿಗೆ ಅವಮಾನಿಸುತ್ತಾ ವಿಕೃತ ಆನಂದ ಅನುಭವಿಸುತ್ತಿರುವುದು ಖಂಡನಿಯ. ಇಂಥ ಕೃತ್ಯವೆಸಗುವ ವ್ಯಕ್ತಿ, ಶಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಂಡು ನಲಿಕೆ ಸಮುದಾಯವನ್ನೊಳಗೊಂಡು ತುಳುನಾಡಿನ ಧೈವ ಭಕ್ತ ಸಮೂಹದ ಭಾವನೆಗಳಿಗೆ ನ್ಯಾಯ ಒದಗಿಸಬೇಕು, ಹಾಗೂ ಸರಣಿಯಾಗಿ ಧೈವ ನಿಂದನೆ ಕೃತ್ಯಗಳ ಮೂಲಕ ಸಮಾಜದ ಶಾಂತಿ ಕದಡಿಸಲು ಯತ್ನಿಸುತ್ತಿರುವ ಕಿಡಿಗೇಡಿ ಶಕ್ತಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಬ್ರಹ್ಮಕಲಶೋತ್ಸವ, ಮೆರವಣಿಗೆ, ವೇದಿಕೆ ಅಲಂಕಾರ ಇತ್ಯಾಧಿ ಕಡೆ ಧೈವದ ವೇಶ ಧರಿಸುವುದು, ದೈವದ ಅಣಿ ಮತ್ತು ಇತರ ವಸ್ತುಗಳನ್ನು ಅಲಂಕಾರಿಕವಾಗಿ ಬಳಸುವುದೂ ಕೂಡ ಸರಿಯಲ್ಲ. ಇದರ ಬಗ್ಗೆಯೇ ನಾವು ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದೇವೆ. ಈಬಗ್ಗೆಯೂ ಸಂಘಟಕರು,ಇತರ ಸಮುದಾಯ ಬಾಂಧವರು ಗಮನಿಸಬೇಕು ಎಂದರು.
ಕೊರಗ ಸಮುದಾಯದ ಮದುರಂಗಿ ಮನೆಯಲ್ಲಿ ನಡೆದಘಟನೆಯ ಬಗ್ಗೆ ತುಟಿ ಪಿಟಕ್ಕೆನ್ನದ ಕೆಲವು ರಾಜಕೀಯ ಪ್ರೇರಿತ ಶಕ್ತಿಗಳು ಕೊರಗ ತನಿಯ ಶೈಲಿಹೋಲುವ ವೇಶಕ್ಕೆ ಭಾರೀ ಆಸಕ್ತಿ ತೋರಿ ಆಕ್ಷೇಪಣೆ ಎತ್ತಿರುವುದನ್ನು ಸೋಷಿಯಲ್ ಮೀಡಿಯಾ ದಲ್ಲಿ ಗಮನಿಸಿದ್ದೇವೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ಜಿಲ್ಲಾ ಸಂಘದ ಸಂಚಾಲಕ ಸೇಸಪ್ಪ ಅಳದಂಗಡಿ, ತಾ.ಸಮಿತಿ ಸದಸ್ಯರಾದ ರಮೇಶ್ ಕೇಳ್ತಾಜೆ ಮತ್ತು ವಿನಯ ಕುಮಾರ್ ಉಪಸ್ಥಿತರಿದ್ದರು.ಈ