Posts

ಕುಕ್ಕಾವಿನ ಮನೆಯಲ್ಲೇ ಮೃತಪಟ್ಟ ಕೋವಿಡ್ ಸೋಕಿತರ ಅಂತ್ಯಸಂಸ್ಕಾರ

1 min read

ಬೆಳ್ತಂಗಡಿ; ಕಡಿರುದ್ಯಾವರ -ಮಿತ್ತಬಾಗಿಲು ಗಡಿಪ್ರದೇಶವಾದ ಕುಕ್ಕಾವು ಇಲ್ಲಿ ಮನೆಯಲ್ಲೇ ಕೋವಿಡ್ ರೋಗದಿಂದ ಮೃತರಾದ ಧರ್ಣಪ್ಪ ಪೂಜಾರಿ (85ವ.) ಅವರ ಅಂತ್ಯಸಂಸ್ಕಾರವನ್ನು ಶಾಸಕ ಹರೀಶ್ ಪೂಂಜ ಮಾರ್ಗದರ್ಶನದಂತೆ "ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್" ತಂಡದ‌ ವತಿಯಿಂದ ಬುಧವಾರ ನಡೆಸಿಕೊಡಲಾಯಿತು.

ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ರಂಜಿತ್, ರಮೇಶ್ ಆಚಾರ್ಯ ಮುಂಡಾಜೆ, ರಿಜೀಶ್ ಕುಮಾರ್ ಗುರುವಾಯನಕೆರೆ, ಮೃತರ ಮೊಮ್ಮಗ ನವೀನ್ ಇವರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರವನ್ನಿ ಕ್ರಮಬದ್ಧವಾಗಿ ನಡೆಸಿಕೊಟ್ಟರು.‌

ಸ್ಥಳದಲ್ಲಿ ಕಡಿರುದ್ಯಾವರ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್, ಮಿತ್ತಬಾಗಿಲು ಗ್ರಾ.ಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ವಿನಯಚಂದ್ರ ಸೇನೆರೊಟ್ಟು, ಸದಸ್ಯರಾದ ಅಹಮದ್ ಕಬೀರ್, ಪಿಡಿಒ ಜಯಕೀರ್ತಿ ಹೆಚ್.ಬಿ, ಗ್ರಾಮಕರಣಿಕ  ಸತೀಶ್, ರಾಜೇಶ್,  ಎಎನ್‌ಎಮ್‌ ಜಯಶ್ರೀ, ಆಶಾ ಕಾರ್ಯಕರ್ತೆ ಭಾರತಿ ಧರ್ಣಪ್ಪ ಗೌಡ, ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮೋರ್ತಾಜೆ, ಸಿಬ್ಬಂದಿ ರಮಾನಂದ, ಸಾವಿತ್ರಿ, ಸುನಂದಾ ಮೊದಲಾದವರು ಉಪಸ್ಥಿತರಿದ್ದರು.

ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ ವೈದ್ಯಾಧಿಕಾರಿ  ಡಾ. ಕಾವ್ಯಾ ವೈಪನಾ, ಮಾನವ ಸ್ಪಂದನ ತಂಡದ‌ ಚೇರ್ಮೆನ್ ಪಿ.ಸಿ‌‌ ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್  ಅಶ್ರಫ್ ಆಲಿಕುಂಞಿ ಮಾರ್ಗದರ್ಶನ ನೀಡಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment