ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್, ಕೆಸಿಎಫ್ ಸಹಯೋಗದ ಸಹಾಯ್ ಕೋವಿಡ್ ತುರ್ತು ತಂಡದ ಎಲ್ಲಾ ವಾರಿಯರ್ಸ್‌ಗಳಿಗೆ ಆದ್ಯತೆಯ ನೆಲೆಯಲ್ಲಿ ವೇಕ್ಸಿನ್ ಒದಗಿಸಿಕೊಡುವಂತೆ ಸಂಘಟನಾ ನಾಯಕರು ಶನಿವಾರ ಶಾಸಕ ಹರೀಶ್ ಪೂಂಜಾ ಅವರನ್ನು ಪ್ರವಾಸಿ ಬಂಗಲೆಯಲ್ಲಿ ಭೇಡಿಮಾಡಿ ಮಾತುಕತೆ ನಡೆಸಿದರು.
ತಾ. ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಮುಸ್ಲಿಂ ಜಮಾಅತ್ ತಾ. ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ ಮತ್ತು ಸಹಾಯಿ ಸರ್ಕಲ್ ನಿರ್ದೇಶಕ ಕೆ.ವೈ ಹಂಝ ಮದನಿ ಇವರು ನಿಯೋಗದಲ್ಲಿದ್ದರು.
ವೇಕ್ಸಿನ್ ಕೊರತೆ ಬಗ್ಗೆ ನಿಯೋಗದ ಜೊತೆ ಮಾತನಾಡಿದ ಶಾಸಕರು ಲಭ್ಯವಾದ ಮೊದಲ ಹಂತದಲ್ಲಿ ಈ ವ್ಯವಸ್ಥೆ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದರು.