Posts

ಬೆಳ್ತಂಗಡಿಯ ಹಿರಿಯ ವೈದ್ಯ ಡಾ. ಜಗನ್ನಾಥ್ ಅವರ ಸೇವೆ ಶ್ಲಾಘಿಸಿದ ಹಾಜಿ ಹಾರಿಸ್ ಇದ್ದಿನಬ್ಬ ಅವರ ಬರಹ ವೈರಲ್

1 min read



ಬೆಳ್ತಂಗಡಿ: "ಕೊರೊನಾ ಕಾಲದಲ್ಲಿ ಮಾನವತೆಯ ಮಿಂಚು" ಎಂಬ ಶೀರ್ಷಿಕೆಯಡಿ ಬೆಳ್ತಂಗಡಿಯ ಯುವ ಉದ್ಯಮಿ ಹಾಜಿ ಹಾರಿಸ್ ಇದ್ದಿನಬ್ಬ ಐ.ಜೆ ಅವರು ಬೆಳ್ತಂಗಡಿಯ ಹಿರಿಯ ವೈದ್ಯ ಡಾ.ಜಗನ್ನಾಥ ಅವರ ಬಗ್ಗೆ ಬರೆದ ಲೇಖನ ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ ಆಗಿದೆ.

ದೀರ್ಘ ವರ್ಷಗಳಿಂದ ಡಾ.‌ಜಗನ್ನಾಥ ಅವರು ಬೆಳ್ತಂಗಡಿಯ ಜನತೆಗೆ ಆರೋಗ್ಯ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುತ್ತಿದ್ದು, ಕೊರೋನಾ ಸಮಯದಲ್ಲಿ ಇತರ ಕೆಲ ವೈದ್ಯರುಗಳ ಸೇವೆಯನ್ನೂ ಮೀರುವ ರೀತಿಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಈ ಬರಹ ನಾಡಿಗೆ ಸಾರಿದೆ.


ಅಷ್ಟಕ್ಕೂ ಆ ಬರಹದಲ್ಲಿ ಏನಿದೆ ನೀವೇ ಓದಿ;

ಕಳೆದ ಶತಮಾನದಲ್ಲಿ ನಾವು ಕಂಡು ಕೇಳರಿಯದ ಒಂದು ಆಪತ್ತು ಕೊರೋನಾ ವೈರಸ್ ರೂಪದಲ್ಲಿ ಇಡೀ ಭುಲೋಕಕ್ಕೆ ಬಂದೆರಗಿದೆ. ಪ್ರಾರಂಭದಲ್ಲಿ ಯಾರು ಕೂಡಾ ಇದು ಇಷ್ಟೊಂದು ತೀವ್ರ ರೂಪ ತಾಳಬಹುದೆಂದುಕೊಂಡಿರಲಿಕ್ಕಿಲ್ಲ. ಇದಕ್ಕೆ ಕೆಲವು ರೊ

ರೋಗಿಷ್ಟ ದೇಹಗಳು ಬಲಿಯಾಗಬಹುದೆಂದು ಕೊಂಡಿದ್ದೆವು. ಈಗ ಇದು ಹರಡುತ್ತಿರುವ ವೇಗ ಮತ್ತು ತೀವ್ರತೆಯು ಅತ್ಯಂತ ಭಯಾನಕವಾಗಿದೆ.

ಆದರೆ ವಿಶೇಷವಾಗಿ ಇದು ಜನರ ಜೀವವನ್ನು ಕೊಲ್ಲುವುದಕ್ಕಿಂತಲೂ ಜನರ ಮಾನವೀಯತೆಯನ್ನೇ  ಕೊಂದದ್ದು ಮಾತ್ರ ಒಂದು ವಿಪರ್ಯಾಸ.

ಇದು ಮಾನವ ಸಂಭಂದಗಳ ಗಟ್ಟಿತನ ಮತ್ತು ಟೊಳ್ಳುತನವನ್ನು ಹಸಿ ಹಸಿಯಾಗಿ ಬಯಲಿಗೆಳೆಯಿತು. ತಾಯಿ -ಮಗ, ತಂದೆ-ಮಗಳು, ಗಂಡ-ಹೆಂಡತಿ, ಗೆಳೆಯ- ಗೆಳತಿ ಎಲ್ಲಾ ಸಂಭಂದಗಳನ್ನು ಓರೆಗೆ ಹಚ್ಚುವ ಒಂದು ಸಂದರ್ಭವನ್ನು ನಿರ್ಮಿಸಿತು.

ಇದರಲ್ಲಿ ಕೆಲವರು ಜಯಗಳಿಸಿದರೆ ಕೆಲವರ ಟೊಳ್ಳುತನ ಬಯಲಾಯಿತು. ಕೊರೊನಕ್ಕೆ ಹೆದರಿ ಮಾನವ ಸಂಭಂದವನ್ನೇ ಕೆಲವರು ಮರೆತರೆ, ರೋಗದ ಹೆಸರಿನಲ್ಲಿ ಜನರನ್ನು ಲೂಟಿ ಮಾಡಲು ಕೆಲವು ಆಸ್ಪತ್ರೆಗಳು ಹಿಂದೆ ಮುಂದೆ ನೊಡಲಿಲ್ಲ, ಶವದ ಅಂತ್ಯ ಕ್ರಿಯೆಗೂ ಕೂಡಾ ಕೆಲವು ಕಡೆ ಊರ ಜನರು ಅಡ್ಡಿಪಡಿಸಿದ ಘಟನೆಗಳು ನಮ್ಮ ಕಣ್ಣೆದುರೇ ನಡೆದವು. ಜಾಗತಿಕ ಮಾಧ್ಯಮಗಳಲ್ಲಿ ನದಿಯಲ್ಲಿ ಶವಗಳು ತೇಲಿ ಬರುವುದನ್ನು ನೊಡಿದ ಮೇಲಂತೂ ಜನರು ಮಾನವ ಸಂಭಂಧಗಳ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡರು. 

ಇಂತಹ ವಿಷಮ ಕಾಲದಲ್ಲೂ ಮಾನವತೆಯನ್ನು ಎತ್ತಿ ಹಿಡಿದು, ಹಣಕ್ಕಾಗಿ ಬಾಯಿ ತೆರೆಯದೆ , ಕಾಯಕವೇ ಕೈಲಾಸ ಎಂದು ಬಗೆದು ಅದರಂತೆ ನಡೆದ ಕೆಲವು ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸದಿದ್ದರೆ ನಾವು ಮನುಷ್ಯತ್ವಕ್ಕೆ ಮಾಡುವ ಅಪಚಾರವಾದೀತು. ಇಂತಹದೇ ಒಂದು ದೀಮಂತ ವ್ಯಕ್ತಿತ್ವ ನಮ್ಮ ಬೆಳ್ತಂಗಡಿಯ ಡಾ. ಜಗನ್ನಾಥ ಎಮ್ ಅವರದು.

ಜಾತಿ ,ಮತ ,ಧರ್ಮ ಯಾವುದನ್ನು ನೋಡದೆ  ಕೇವಲ ವೈದ್ಯ ದರ್ಮವನ್ನು ಪಾಲಿಸಿ ಯಾವುದೇ ಸಂಧರ್ಭದಲ್ಲೂ ತನ್ನ ಜನರ ಸೇವೆಗೆ ಸಿದ್ದರಾಗಿರುವ ಡಾ.ಜಗನ್ನಾಥ ಎಮ್ ಅಂತಹವರನ್ನು ಪಡೆದ ನಮ್ಮಂತಹ ಬೆಳ್ತಂಗಡಿಗರು ನಿಜವಾಗಿಯೂ ಬಾಗ್ಯಶಾಲಿಗಳು ಎಂದರೆ ಅತಿಶಯೊಕ್ತಿಯಾಗಲಾರದು. ಇಂತಹ ವ್ಯಕ್ತಿಗಳು ನಮ್ಮ ನಡುವೆ ಇರುವುದರಿಂದಲೇ ಇಂತಹ ಕೊರೋನಾ ಕಾಲದಲ್ಲೂ ಜೀವನ ಸಹ್ಯವೆಸುತ್ತದೆ. ಇವರಿಗೆ ನೂರು ವರ್ಷ ಆರೊಗ್ಯಪೂರ್ಣ ಜೀವನವನ್ನು ದಯಪಾಲಿಸಲೆಂದು ಸರ್ವಶಕ್ತನಾದ ದೇವರಲ್ಲಿ ಪ್ರಾರ್ಥಿಸೋಣ ಮತ್ತು ಇವರು ಎಲ್ಲಾ ವೈದ್ಯರಿಗೂ ಮಾದರಿಯಾಗಲಿ ಎಂದು, ಎಲ್ಲಾ ಕಡೆಯೂ ಇಂತಹ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗಲಿ.  ಕೊರೊನಾ ಕತ್ತಲನ್ನು ಹೊಡೆದೋಡಿಸಲಿ ಎಂದು ಆಶಿಸೋಣ ಎಂದು ಬರೆದಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment