Posts

ಎಸ್‌ವೈಎಸ್ ಕಾಜೂರು ಶಾಖೆ ಮಹಾಸಭೆ; ನೂತನ ಅಧ್ಯಕ್ಷರಾಗಿ ಕೆ ಎಮ್ ಅಬೂಬಕ್ಕರ್ ಕುಕ್ಕಾವು ಆಯ್ಕೆ

1 min read

ಬೆಳ್ತಂಗಡಿ; ಆಧ್ಯಾತ್ಮಿಕ ನಾಯಕ  ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರ ಆಶಿರ್ವಾದದೊಂದಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಮುನ್ನಡೆಯುತ್ತಿರುವ ಕಾಜೂರು ಎಸ್‌ವೈಎಸ್  ಶಾಖೆಯ ಮಹಾಸಭೆಯು ಕಾಜೂರು ರಹ್ಮಾನಿಯಾ ಮಸ್ಜಿದ್‌ನಲ್ಲಿ ಕಾಜೂರ್ ದರ್ಗಾ ಅಧ್ಯಕ್ಷ ಜನಾಬ್ ಕೆ ಯು ಇಬ್ರಾಹಿಂ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. 


ಉಜಿರೆ ಸೆಂಟರ್ ಸಮಿತಿ  ನಿಯೋಜಿತ ಪ್ರತಿನಿಧಿಗಳಾದ ಅಬ್ದುಲ್ ರಶೀದ್ ಬಲಿಪಾಯ ಮತ್ತು ಅಬ್ದುಲ್ ರಹಿಮಾನ್ ವಿಕ್ಷಕರಾಗಿ ಆಗಮಿಸಿದ್ದರು. ಈ ಸಭೆಯನ್ನು ಎಸ್‌ವೈಎಸ್ ಸದಸ್ಯ ಕೆ. ಹೆಚ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಕ್ಕಾವು ಉದ್ಘಾಟಿಸಿದರು. ನಿಕಟ ಪೂರ್ವ ಅಧ್ಯಕ್ಷ ಕೆ. ಯು ಮುಹಮ್ಮದ್ ಸಖಾಫಿ ದುವಾ ಆಶೀರ್ವಚನ ಹಾಗೂ ವಿದಾಯ ಭಾಷಣ ಮಾಡಿದರು. ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಕೆ ಎಂ ಹೈದರಾಲಿ ವರದಿ, ಲೆಕ್ಕಪತ್ರ ಮಂಡಿಸಿದರು.

ಈ ಸಭೆಯಲ್ಲಿ ಕಾಜೂರ್ ದರ್ಗಾ ಶರೀಫ್ ಆಡಳಿತ ಸಮಿತಿ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್., ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸದಸ್ಯರಾದ ಬದ್ರುದ್ದಿನ್, ಎ ಯು ಮುಹಮ್ಮದ್ ಅಲಿ, ಸಿದ್ದೀಕ್ ಕೆ ಹೆಚ್, ಉಮರ್, ಅಬ್ಬಾಸ್,ಎನ್.ಎಮ್ ಯಾಕುಬ್, ಎಸ್‌ಜೆಯು ಸದಸ್ಯ ಹಾಜಿ ಕೆ ಯು ಉಮರ್ ಸಖಾಫಿ, ಮಲವಂತಿಗೆ ಗ್ರಾಮ ಪಂಚಾಯತ್ ಸದಸ್ಯ ಕೆ. ಯು ಮೊಹಮ್ಮದ್,ಎಸ್‌ಎಮ್‌ಎ ಜಿಲ್ಲಾ ಕಾರ್ಯದರ್ಶಿ ಕೆ.ಪಿ ಮುಹಮ್ಮದ್, ಎಸ್ಸೆಸ್ಸೆಫ್ ಕಾಜೂರ್ ಯುನಿಟ್ ಅಧ್ಯಕ್ಷ ಸಿರಾಜುದ್ದೀನ್, ಸ್ವಲಾತ್ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಜ್, ಪಿಟಿಎ ಅಧ್ಯಕ್ಷ ಡಿವೈ ಉಮ್ಮರ್ , ಜಿನಗರ ಮಸೀದಿ ಅಧ್ಯಕ್ಷ ಉಸ್ಮಾನ್ ಪಗರೆ, ಇವರುಗಳು ಭಾಗವಹಿಸಿದ್ದರು.

ಎಸ್‌ವೈಎಸ್ ಕಾಜೂರು ಶಾಖೆ ಇದರ ಆರ್ಥಿಕತೆಯಲ್ಲಿ ಬೆನ್ನೆಲುಬಾಗಿರುವ ಕಾಜೂರು ಡೆವಲಪ್ಮೆಂಟ್ ಕಮಿಟಿ (ಕೆಡಿಸಿ) ಇದರ ಸೌದಿ ಅರೇಬಿಯಾ ಸಂಘಟನೆ ಪ್ರತಿನಿದಿಗಳಾದ ಕೆ. ಎಂ ಹನೀಫ್, ಇಬ್ರಾಹಿಂ ಇಬ್ಬಿ ಮತ್ತು ಮೊಯಿದು ಹಾಜಿ  ಉಪಸ್ಥಿತರಿದ್ದರು.

ಮುಂದಿನ ಸಾಲಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಕೆ. ಎಂ ಅಬೂಬಕ್ಕರ್ ಕುಕ್ಕಾವು, ಪ್ರಧಾನ ಕಾರ್ಯದರ್ಶಿಯಾಗಿ ಕೆ ಎಂ ಹೈದರಾಲಿ ಕಾಜೂರು, ಕೋಶಾಧಿಕಾರಿಯಾಗಿ ಎ.ಯು ಮುಹಮ್ಮದಾಲಿ ದಿಡುಪೆ, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಜ್ ಪಿ.ಎ, ಇಸಾಭ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಜ್ ಜಿ ನಗರ, ದ‌ಅವಾ ಕಾರ್ಯದರ್ಶಿಯಾಗಿ ಡಿ.ವೈ ಉಮ್ಮರ್ ಕುಕ್ಕಾವು ಇವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಯು ಮುಹಮ್ಮದ್ ಸಖಾಫಿ, ಕೆ.ಪಿ ಮುಹಮ್ಮದ್ ಅಬೂಸಾಲಿ, ಇದ್ದಿನಬ್ಬ, ಜೆ. ಹೆಚ್ ಉಸ್ಮಾನ್, ಕೆ.ಹೆಚ್ ಸಿದ್ದೀಕ್, ಯು. ಮುಹಮ್ಮದ್, ಬಿ.ಎ ಯೂಸುಫ್ ಶರೀಫ್, ಕೆ.ಎಂ ಉಮರ್ ಸಖಾಫಿ, ಬಿವೈ ಮುಸ್ತಫಾ ಹಾಗೂ ಪಿ.ಎ ಅಬ್ದುಲ್ ಹಮೀದ್ ಅವರನ್ನು ಆಯ್ಕೆ ಮಾಡಲಾಯಿತು.

ಕಾಜೂರು ದರ್ಗಾ ಅಧ್ಯಕ್ಷ  ಕೆ. ಯು ಇಬ್ರಾಹಿಂ ನೂತನ ಸಮಿತಿಗೆ ಶುಭ ಹಾರೈಸಿ ಪ್ರಕೃತ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಹೈದರಾಲಿ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment