Posts

ಹೃದಯ ತಜ್ಞ ಡಾ.ಪದ್ಮನಾಭ ಕಾಮತ್‌ರಿಂದ ಅಳದಂಗಡಿ ಆಸ್ಪತ್ರೆಗೆ ಇಸಿಜಿ ಯಂತ್ರ ಕೊಡುಗೆ

0 min read


ಬೆಳ್ತಂಗಡಿ: ಮಂಗಳೂರಿನ ಹೃದ್ರೋಗ ತಜ್ಞ, ಕೆ.ಎಂ.ಸಿ. ಆಸ್ಪತ್ರೆಯ ಡಾ. ಪದ್ಮನಾಭ ಕಾಮತ್ ಅವರ ನೇತೃತ್ವದ ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ (ಸಿಎಡಿ)ಫೌಂಡೇಶನ್ ಟ್ರಸ್ಟ್ ಇವರ ಪ್ರಾಯೋಜಕತ್ವದಲ್ಲಿ ಇ.ಸಿ.ಜಿ. ಟೆಲಿಕನ್ಸ್ ಲ್ ಟೇಶನ್ ಯಂತ್ರವನ್ನು (ಹೃದಯ ಸಂಬಂಧಿತ ಚಿಕಿತ್ಸಾ ಯಂತ್ರ)ಉಚಿತವಾಗಿ ಅಳದಂಗಡಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ನೀಡಲಾಯಿತು.


ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಅವರ ವಿಶೇಷ ಪ್ರಯತ್ನದಿಂದ ಈ ಸೌಲಭ್ಯ ಒದಗಿಸಲಾಗಿದ್ದು,

ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು  ವಿನಂತಿಸಲಾಯಿತು.

ಈ ಸಂದರ್ಭ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್, ಅಳದಂಗಡಿ ಗ್ರಾ. ಪಂ. ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಹರೀಶ್ ಆಚಾರ್ಯ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment