Posts

ಬೆಳ್ತಂಗಡಿಯಲ್ಲಿ 40 ಪಂಚಾಯತ್‌ಗಳಲ್ಲಿ ಇನ್ನು ಮುಂದಕ್ಕೆ ಬಿಜೆಪಿಯ ಅಧಿಕಾರ

1 min read

ಮುಂಡಾಜೆಯಲ್ಲಿ ನಡೆದ ವಿಜಯೋತ್ಸವ ದೃಷ್ಯ

ಬೆಳ್ತಂಗಡಿ; ತಾಲೂಕಿನ 46 ಗ್ರಾಮ ಪಂಚಾಯತಿ ಗಳಿಗೆ ನಡೆದ ಚುನಾವಣೆಯ ಅಂತಿಮ‌ ಫಲಿತಾಂಶ ಹೊರಬರುತ್ತಿರುವಂತೆ ತಾಲೂಕಿನಲ್ಲಿ ಒಟ್ಟು40 ಗ್ರಾಮ ಪಂಚಾಯತಿಗಳಲ್ಲಿ‌ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲಿದ್ದು,5 ಪಂಚಾಯತಿ ಗಳಲ್ಲಿ ಮಾತ್ರ  ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಬೆಳಾಲು

ಒಂದು ಗ್ರಾಮ‌ ಪಂಚಾಯತ್‌ನಲ್ಲಿ ಸಮಬಲದಲ್ಲಿ ಕಾಂಗ್ರೆಸ್- ಬಿಜೆಪಿ ಬೆಂಬಲಿತ ಸದಸ್ಯರು ಜಯಗಳಿಸಿ ಅತಂತ್ರ ಸ್ಥಿತಿ ಎದುರಾಗಿದೆ.

ಸ್ಥಾನ ಬಲ‌ ನೋಡುವುದಾದರೆ 631 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಅತೀಹೆಚ್ಚು ಎಂದರೆ 481 ಸ್ಥಾನಗಳಲ್ಲಿ ಗೆದ್ದು ಬಂದಿದ್ದರೆ, ಕಾಂಗ್ರೆಸ್ ಬೆಂಬಲಿತರು 122 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಜೆಡಿಎಸ್ ಒಂದು ಸದಸ್ಯನನ್ನು ಮಾತ್ರ ಪಡೆಯಕು ಶಕ್ತವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಎಸ್‌ಡಿಪಿಐ22 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ದಾಖಲೆ ಬರೆದಿದೆ‌. ಇತರ 6 ಪಂಚಾಯತಿ ಗಳಲ್ಲಿ 6 ಮಂದಿ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ತೆಕ್ಕಾರು, ಬಾರ್ಯ, ತಣ್ಣೀರುಪಂತ, ಕಾಶಿಪಟ್ಣ ಮತ್ತು ಮಾಲಾಡಿ ಪಂಚಾಯತಿ ಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸಪಲರಾದರೆ ಬೆಳಾಲಿನಲ್ಲಿ ಸಮಬಲದಲ್ಲಿ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡ ಬಳಿಕದ ವಿದ್ಯಮಾನದಲ್ಲಿ ಈ ಪೈಕಿ ಯಾರು ಅಧಿಕಾರವನ್ನು ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ‌ ಮನೆಮಾಡಿದೆ.

ಪಕ್ಷೇತರರು ಮಾಲಾಡಿ, ಬಾರ್ಯ, ನಡ, ಮಿತ್ತಬಾಗಿಲು, ಅಂಡಿಂಜೆ ಮತ್ತು ಲಾಯಿಲ ಎಂಬಲ್ಲಿ ಪಕ್ಷೇತರರು ವಿಜಯಿ ಯಾಗಿದ್ದಾರೆ.

ಚುನಾವಣೆಗೂ ಮೊದಲೇ ಪಡಂಗಡಿ, ತೆಕ್ಕಾರು, ಮಿತ್ತಬಾಗಿಲು, ಲಾಯಿಲ, ಕಲ್ಮಂಜ ಮತ್ತು ಮಡಂತ್ಯಾರು ಪಂಚಾಯತಿ ಗಳಲ್ಲಿ ಒಟ್ಟು 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.‌


12 ಪಂಚಾಯತ್ ಗಳಲ್ಲಿ ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಂಡ ಬಿಜೆಪಿ ಬೆಂಬಲಿತರು;


ಸದ್ರಿ ಚುನಾವಣೆಯಲ್ಲಿ ಈ ಬಾರಿ ಒಟ್ಟು 12 ಗ್ರಾಮ ಪಂಚಾಯತಿಗಳಾದ ಸುಲ್ಕೇರಿ (7 ಸ್ಥಾನಗಳು),  ಮರೋಡಿ (11 ಸ್ಥಾನಗಳು),ಪಡಂಗಡಿ ( 17 ಸ್ಥಾನಗಳು),ಮುಂಡಾಜೆ (11 ಸ್ಥಾನಗಳು),ಪುದುವೆಟ್ಟು (9 ಸ್ಥಾನಗಳು), ಪಟ್ರಮೆ, ಶಿಶಿಲ ಮತ್ತು ಶಿಬಾಜೆಯಲ್ಲಿ ತಲಾ (6 ಸ್ಥಾನಗಳು), ಕೊಕ್ಕಡ (13  ಸ್ಥಾನಗಳು), ಅರಸಿನಮಕ್ಕಿ (13 ಸ್ಥಾನಗಳು), ಬಂದಾರು (16 ಸ್ಥಾನಗಳು), ಮಚ್ಚಿನ (14 ಸ್ಥಾನಗಳು), ಗಳಿರುವ ಎಲ್ಲೆಡೆ ಎಲ್ಲಾ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ.

9 ಪಂಚಾಯತಿ ಗಳ22 ಸ್ಥಾನಗಳನ್ನು ಗೆದ್ದುಕೊಂಡ ಎಸ್‌ಡಿಪಿಐ ಬೆಂಬಲಿತರು; 

ಈ ಬಾರಿಯ ಚುನಾವಣೆಯಲ್ಲಿ ಕೆವೆಟ್ಟು ಕ್ಷೇತ್ರದಲ್ಲಿ 6 ಸ್ಥಾನಗಳು, ತಣ್ಣೀರುಪಂತದಲ್ಲಿ 4, ಮಡಂತ್ಯಾರು ಮತ್ತು ಲಾಯಿಲದಲ್ಲಿ 3, ಚಾರ್ಮಾಡಿ ಯಲ್ಲಿ‌ 2, ಬಳಂಜ, ಮಿತ್ತಬಾಗಿಲು, ತೆಕ್ಕಾರು, ಇಳಂತಿಲ ಗ್ರಾಮ ಪಂಚಾಯತಿ ಗಳಲ್ಲಿ‌ ಎಸ್‌ಡಿಪಿಐ ಒಟ್ಟು 22 ಸ್ಥಾನಗಳನ್ನು ಗೆದ್ದುಕೊಂಡಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment