Posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಚುಶ್ರೀ ಬಾಂಗೇರು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘಕ್ಕೆ 2021ನೇ ಸಾಲಿಗೆ ಅಧ್ಯಕ್ಷರಾಗಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ಅಚುಶ್ರೀ ಬಾಂಗೇರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಸಂಘದ ಮಹಾಸಭೆ ಶನಿವಾರ ಸಂಘದ ಕಚೇರಿಯಲ್ಲಿ ನಡೆದು ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ಉಳಿದಂತೆ ಉಪಾಧ್ಯಕ್ಷರಾಗಿ ಉದಯವಾಣಿ ವೇಣೂರು ಭಾಗದ ವರದಿಗಾರ ಪದ್ಮನಾಭ ಕುಲಾಲ್, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವರದಿಗಾರ ಜಾರಪ್ಪ ಪೂಜಾರಿ, ಜತೆ ಕಾರ್ಯದರ್ಶಿಯಾಗಿ  ಟೈಮ್ಸ್ ಆಫ್ ಕುಡ್ಳಾದ ವರದಿಗಾರ ಸಂಜೀವ ಎನ್.ಸಿ., ಕೋಶಾಧಿಕಾರಿಯಾಗಿ ಈ ಸಂಜೆ ವರದಿಗಾರ ಪ್ರಸಾದ ಶೆಟ್ಟಿ ಏಣಿಂಜೆ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯನ್ನು ಪ್ರಜಾವಾಣಿ ಹಿರಿಯ ವರದಿಗಾರ ಆರ್. ಎನ್‌.ಪೂವಣಿ ನಡೆಸಿಕೊಟ್ಟರು.

ಸದಸ್ಯರಾಗಿ ಉದಯವಾಣಿಯ ಚೈತ್ರೇಶ್ ಇಳಂತಿಲ, ವಿಜಯವಾಣಿಯ ಮನೋಹರ ಬಳಂಜ, ವಿಜಯಕರ್ನಾಟಕ ಕೊಕ್ಕಡ‌ ಭಾಗದ ವರದಿಗಾರ ಸುಬ್ರಹ್ಮಣ್ಯ ಶಗ್ರಿತ್ತಾಯ, ಹೊಸದಿಗಂತದ ದೀಪಕ ಆಠವಳೆ, ಪ್ರಜಾವಾಣಿಯ ಗಣೇಶ ಶಿರ್ಲಾಲು, ವಾರ್ತಾಭಾರತಿಯ ಶಿಬಿ ಧರ್ಮಸ್ಥಳ, ಸಂಯುಕ್ತ ಕರ್ನಾಟಕದ ಪುಷ್ಪರಾಜ ಶೆಟ್ಟಿ ಹಾಗು ಶ್ರೀನಿವಾಸ ತಂತ್ರಿ, ಸುದ್ದಿಬಿಡುಗಡೆಯ ಮಂಜುನಾಥ ರೈ, ಬಿ.ಎಸ್.ಕುಲಾಲ್, ಜಯಕಿರಣದ ಅಶ್ರಫ್ ಆಲಿಕುಂಞಿ, ಸಂಜೆ ವಾಣಿಯ ಧನಕೀರ್ತಿ ಆರಿಗ, ಜೈ ಕನ್ನಡಮ್ಮದ ದೇವಿಪ್ರಸಾದ್, ಹೃಷಿಕೇಶ್ ಧರ್ಮಸ್ಥಳ ಹಾಗು ಗುರುಮೂರ್ತಿ ಶಗ್ರಿತ್ತಾಯ ಮುಂದುವರಿಯಲಿದ್ದಾರೆ. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ ಗೇರುಕಟ್ಟೆ ಉಪಸ್ಥಿತರಿದ್ದರು. 

ಇದಕ್ಕೂ ಮೊದಲು ಅಶ್ರಫ್ ಆಲಿಕುಂಞಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದು, ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಲಾಯಿತು. ಮುಂದಿನ ದಿನಗಳಲ್ಲಿ ಅಧ್ಯಯನ ಪ್ರವಾಸ ಹಾಗು ಚಾರಣ ಹೋಗುವುದೆಂದು ನೂತನ ಅಧ್ಯಕ್ಷರು ತಿಳಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official