Posts

ಮೊಬೈಲ್ ನೆಟ್‌ವರ್ಕ್ ಗಾಗಿ ಪರದಾಡುವ ಪೊಮ್ಮಾಜೆಯ ವಿದ್ಯಾರ್ಥಿಗಳು ಮತ್ತು ಜನತೆ! ತಹಶಿಲ್ದಾರರಿಗೆ ಮನವಿ

1 min read


ಬೆಳ್ತಂಗಡಿ; ತಾಲೂಕಿನ ಸೋಣಂದೂರು ಗ್ರಾಮದ ಪೊಮ್ಮಾಜೆ ಪರಿಸರದ ಜನರು ಖಾಸಗಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಹಲವು ವರ್ಷಗಳಿಂದ ಎದುರಿಸುತ್ತಾ ಬಂದಿದ್ದು, ಮತ್ತೊಮ್ಮೆ ತಹಶಿಲ್ದಾರರ ಮೂಲಕ ಆಡಳಿತದ ಗಮನಕ್ಕೆ ತಂದಿದ್ದಾರೆ.

ಅನೇಕ ಬಾರಿ ತಮ್ಮ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಹಕರ ಅಂಬೋಣ.

ಈ ಪರಿಸರದಲ್ಲಿ ಹಲವಾರು ಮನೆಗಳಿದ್ದು ಏನಾದರೂ ತುರ್ತು ಪರಿಸ್ಥಿತಿ ಎದುರಾದಾಗ ಈ ಪರಿಸರದ ಜನ ಪರಿಸರದ ಎತ್ತರದ ಸ್ಥಳದೆಡೆ ಹೆಜ್ಜೆಹಾಕಬೇಕಾದ ಅನಿವಾರ್ಯತೆ ಇದೆ. 

4G ನೆಟವರ್ಕ್ ಕಾಲದಲ್ಲಿ ಬದುಕುತಿರುವ ಸಮಯದಲ್ಲಿ ನಮಗೆ ನೆಟವರ್ಕ್ ಸಮಸ್ಯೆ ಇದೆ ಎಂದು ಹೇಳಲೂ ಮುಜುಗರ ಎನಿಸುತ್ತಿದೆ ಎಂದು ಪೊಮ್ಮಾಜೆ ಜನ ಅಭಿಪ್ರಾಯಪಡುತ್ತಾರೆ. 

ವಿದ್ಯಾರ್ಥಿಗಳಿಗೂ ಆನ್ಲೈನ್ ಪಾಠದ ಕಿರಿಕಿರಿ;

ನೆಟ್ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಆನ್‌ಲೈನ್‌  ತರಗತಿಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಇಂಟ​ರ್ನೆ​ಟ್‌ ಸಿಗದೆ ಪರ​ದಾ​ಡು​ತ್ತಿ​ರುವ ಪೊಮ್ಮಾಜೆ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿಕೊಂಡು ಪಾಠ ಕೇಳುವಂತಹ ಪರಿಸ್ಥಿತಿ ಇದೆ ಎಂಬುದು ಮಕ್ಕಳ‌ಹೆತ್ತವರ ಗೋಳು.

ಶಾಸಕರ ಮೇಲೆ‌ ಭರವಸೆ;

ತಾಲೂಕಿನ ಹಲವಾರು ಸಮಸ್ಯೆಗಳಿಗೆ ಪಾದರಸದಂತೆ ಸ್ಪಂದಿಸಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ಶಾಸಕ ಹರೀಶ್ ಪೂಂಜಾ ಅವರ‌ ಬಗ್ಗೆ‌ ಇಲ್ಲಿನ ಜನ ಭರವಸೆ ಇಟ್ಟುಕೊಂಡಿದ್ದು, ಅವರಿಂದ ಖಂಡಿತಾ ಇದಕ್ಕೆ ಪರಿಹಾರ ಸಿಕ್ಕೇ ಸುಗುತ್ತದೆ ಎಂದು ನಂಬಿಕೊಂಡಿದ್ದಾರೆ.

ತಮ್ಮ ನೆಟ್ವರ್ಕ್ ಸಮಸ್ಯೆಯ ಬಗ್ಗೆ  ಅಧಿಕಾರಿಗಳ ಗಮನಸೆಳೆಯುವ ಉದ್ದೇಶದಿಂದ ಅಲ್ಲಿನ‌ ನಾಗರಿಕರು ಉಪತಹಶೀಲ್ದಾರ್ ರವಿ ಅವರ ಮೂಲಕ ಮನವಿ ಸಲ್ಲಿಸಿದರು.‌ಈ ವೇಳೆ ಪ್ರಮುಖರಾದ ಸಲೀಮ್ ಪೊಮ್ಮಾಜೆ, ರಮ್ಲಾ ಪೊಮ್ಮಾಜೆ , ಇಸ್ಮಾಯಿಲ್  ಪೊಮ್ಮಾಜೆ ಮತ್ತು ರಿಯಾಝ್ ಯಸ್ ಪೊಮ್ಮಾಜೆ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment