Posts

ನೀರು ನಾಯಿಗಳ ಹಿಂಡು ಬಂದಾರು ಹೊಳೆಯಲ್ಲಿ ಮತ್ತೆ ಪ್ರತ್ಯಕ್ಷ

0 min read


ಬೆಳ್ತಂಗಡಿ: ಎರಡು ವಾರಗಳ ಹಿಂದೆ ತಾಲೂಕಿನ ಗರ್ಡಾಡಿ ಎಂಬಲ್ಲಿನ ಹೊಳೆ ಮತ್ತು ಇತರೆಡೆ ನದಿಯಲ್ಲಿ ಕಂಡು ಬಂದಿದ್ದ ನೀರು ನಾಯಿಗಳ ಹಿಂಡು ಇದೀಗ ಬಂದಾರು ಹೊಳೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.

ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈರೋಳ್ತಡ್ಕ- ಪುತ್ತಿಲ ಸಮೀಪವಿರುವ ನದಿಯಲ್ಲಿ ನಾಯಿಗಳ ಗುಂಪು ಕಾಣಸಿಕ್ಕಿದೆ.

ಅವುಗಳು ನದಿಯಲ್ಲಿ ಮೀನುಗಳನ್ನು ಭೇಟೆಯಾಡುತ್ತಾ ಈಜಿ ಸಾಗುತ್ತಿರುವ ದೃಶ್ಯವನ್ನು ಜನತೆ ಕಂಡಿದ್ದು, ಆಶ್ಚರ್ಯಗೊಂಡಿದ್ದಾರೆ.

ಇದೊಂದು ಜಾತಿಯ ಪ್ರಾಣಿಯಾಗಿದ್ದು, ಇದು ಮೀನಿನ ಭೇಟೆಗಾಗಿ ಈ ಸಮಯದಲ್ಲಿ ಕಂಡು ಬರುತ್ತಿದ್ದು,ಮನುಷ್ಯರಿಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ ಎಂದು ವನ್ಯಜೀವಿ ವಿಭಾಗದವರು ಮಾಹಿತಿ ನೀಡುತ್ತಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment