ಬೆಳ್ತಂಗಡಿ; ಹಿ.ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಂಗಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗಾಡಿ ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕ ಅನುತಾನಂದ ಹೆಗ್ಡೆ ಅವರಿಗೆ ಮಂಗಳವಾರ ಅವರ ಬಂಗಾಡಿ ಶಾಲೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ವಸಂತ ಬಂಗೇರರು, ಶಿಕ್ಷಕರೆಂದರೆ ದೇಶ ಕಟ್ಟುವವರು. ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸುವ ನಿಭಾಯಿಸುವ ಶಕ್ತಿ ಇರುವವರೂ ಅವರೇ. ಸಮಾಜವನ್ನು ತಿದ್ದಲು ಶಿಕ್ಷಕರಿಂದ ಮಾತ್ರ ಸಾಧ್ಯ. ಭ್ರಷ್ಟಾಚಾರ ರಹಿತ ಸಮಾಜದ ನಿರ್ಮಾಣ ಹಾಗೂ ಸರಕಾರಿ ವೃತ್ತಿಯಲ್ಲಿ ಭ್ರಷ್ಟಾಚಾರ ಇಲ್ಲದಂತೆ ಕೆಲಸ ಮಾಡುವವರು ಇದ್ದರೆ ಅದು ಶಿಕ್ಷಕರು ಮಾತ್ರ. ಆದ್ದರಿಂದ ಈ ದೇಶಕ್ಕೆ ಅಂಟಿರುವ ಭ್ರಷ್ಟಾಚಾರವೆಂಬ ಅನಿಷ್ಟ ತೊಲಗಿಸುವಲ್ಲಿ, ಇಂದಿನ ಮಕ್ಕಳನ್ನು ಆ ನಿಟ್ಟಿನಲ್ಲಿ ತಯಾರುಗೊಳಿಸುವಲ್ಲಿ ಶಿಕ್ಷಕರು ಪಾತ್ರವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಂಗಾಡಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಬಂಗಾಡಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಇಂದಬೆಟ್ಟು ಗ್ರಾ.ಪಂ ಸದಸ್ಯ ವೀರಪ್ಪ ಮೊಯ್ಲಿ, ಶಿಕ್ಷಕರಾದ ಅನುಪಮಾ, ಪ್ರೇಮಾವತಿ, ಕೋಕಿಲಾ, ಮಲ್ಲಿಕಾ, ರೇವತಿ, ಪ್ರಮುಖರಾದ ಇಬ್ರಾಹಿಂ, ರವಿ ನೇತ್ರಾವತಿನಗರ, ಭರತ್ ಬಂಗಾಡಿ, ರಾಜಗೋಪಾಲ್, ಬಿ.ಹೆಚ್ ಅಬೂಬಕ್ಕರ್, ರಾಜೇಶ್ ಎರ್ಮಾಳ, ಅಶ್ವಥ ಕಲ್ಲಾಜೆ, ಇಸುಬು ಎರ್ಮಾಳ, ಎಲಿಯಾ, ಸುಂದರ ಗೌಡ ಬೆದ್ರಬೆಟ್ಟು, ಜಯರಾಮ ಗೌಡ ಬಂಗಾಡಿ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ, ದೇವನಾರಿ ಶಾಲಾ ಮುಖ್ಯಶಿಕ್ಷಕ ಕಿಶೋರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.