ಬೆಳ್ತಂಗಡಿ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಜು.29 ರಂದು ಜಮಾಅತ್ ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆಯಲ್ಲಿ ಜರುಗಿತು.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಹಮೀದ್ ನೆಕ್ಕರೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಬೀರ್ ಬಿಕೆಹೆಚ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಚರ್ಚೆಗಳ ಬಳಿಕ ಯುವಕರಿಗೆ ಆದ್ಯತೆ ನೀಡಿ 2022-23 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಅದ್ಯಕ್ಷಾಗಿ ಯುವ ಉದ್ಯಮಿ ಬಶೀರ್ ನೆಕ್ಕರೆ,ಉಪಾಧ್ಯಕ್ಷರಾಗಿ ಉಸ್ಮಾನ್ ಎಂ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಸಿ, ಜೊತೆ ಕಾರ್ಯದರ್ಶಿಯಾಗಿ ಕರೀಂ ಕುರುಡಿಯ, ಕೋಶಾಧಿಕಾರಿಯಾಗಿ ರಶೀದ್ ಜೈಭಾರತ್ ಆಯ್ಕೆಯಾದರು.
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಮೀದ್ ನೆಕ್ಕರೆ,ಕರೀಂ ಕೆ.ಎಸ್, ಶಬೀರ್ ಬಿಕೆಹೆಚ್, ಅಶ್ರಫ್ ಆಲಿಕುಂಞಿ, ಸಯ್ಯದಲಿ ಹಾಜಿ, ಅಬ್ದುಲ್ ಖಾದರ್ ಮುಸ್ಲಿಯಾರ್, ರಮ್ಲ ನೆಕ್ಕರೆ ಮತ್ತು ಅಬೂಬಕ್ಕರ್ ಕೂಳೂರು ಇವರು ಆಯ್ಕೆಯಾದರು.
ಜಮಾಅತ್ ಗೌರವಾಧ್ಯಕ್ಷರಾಗಿ ಸಯ್ಯಿದ್ ಕಾಜೂರು ತಂಙಳ್ ಅವರನ್ನು ಸರ್ವಾನುಮತದಿಂದ ಮುಂದುವರಿಸಲಾಯಿತು. ಜಮಾಅತ್ ನ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ನೂತನ ಕಾರ್ಯದರ್ಶಿ ಅಬ್ಬಾಸ್ ಸಿ ವಂದನಾರ್ಪಣೆಗೈದರು.