ಬೆಳ್ತಂಗಡಿ; ದೇಶದ್ರೋಹ ಘಟನೆಯನ್ನು ಖಂಡಿಸಿ ಉಜಿರೆ ಸೇರಿದಂತೆ ಇತರ ಕಡೆಯ ಮುಸಲ್ಮಾನ ಮುಖಂಡರೇಕೆ ಪ್ರತಿಕ್ರಿಯಿಸುತ್ತಿಲ್ಲ. ಉಜಿರೆಯಲ್ಲಿ ದೇಶದ್ರೋಹ ಕೃತ್ಯ ನಡೆಸಿ ಈಗಾಗಲೇ ಬಂಧಿಗಳಾಗಿರುವವರನ್ನು ತಮ್ಮ ಜಮಾಅತ್‌ನಿಂದ ಹೊರಹಾಕುವ ಕೆಲಸ ಸಮುದಾಯದ ಮುಖಂಡರಿಂದ ಆಗಲಿ. ಆಗ ನಾವು ನಿಮ್ಮ ದೇಶಪ್ರೇಮವನ್ನು ಒಪ್ಪಿಕೊಳ್ಳುತ್ತೇವೆ ಎಂದು ಶರಣ್ ಪಂಪ್ವೆಲ್ ಸವಾಲೆಸೆದರು.
ಉಜಿರೆಯಲ್ಲಿನ ನಡೆದ ಪಾಕ್ ಘೋಷಣೆ ಬಳಿಕದ ವಿದ್ಯಮಾನಗಳನ್ನು ಮುಂದಿಟ್ಟು ಗುರುವಾರ ಉಜಿರೆ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಹೋರಾಟ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಎಸ್‌ಡಿಪಿಐ, ಪಿಎಫ್‌ಐ ಈ ದೇಶವನ್ನು ಇಸ್ಲಾಮೀಕರಣಗೊಳಿಸಲು ಹುಟ್ಟಿದ ಸಂಘಟನೆಗಳು. ಅವರ ಪಕ್ಷ ಅಲ್ಲಲ್ಲಿ ಗೆಲುವಾದಾಗ ಪಾಕ್ ಪರ ಘೋಷಣೆ ಕೂಗಿದ್ದಾರೆ.
ಠಾಣೆಯ ಎದುರು ಜಮಾಯಿಸಿ ಪೊಲೀಸರಲ್ಲಿ ಭಿಕ್ಷೆ ಬೇಡಿದ ರೀತಿಯಲ್ಲಿ ಮಾತನಾಡಿದ್ದಾರೆ. ನಮಗೆ ಅನ್ಯಾಯವಾಗಿದೆ.
ನ್ಯಾಯ ಕೊಡಿ ಎಂದು ಅಂಗಲಾಚಿಕೊಳ್ಳುವುದು ನೋಡಿದ್ದೇವೆ. ಇವರಿಗೆ ಕೆ.ಜಿ ಹಳ್ಳಿಯಲ್ಲಿ ಠಾಣೆಗೆ ಬೆಂಕಿ ಇಟ್ಟಾಗ, ಅಖಂಡ ಶ್ರೀನಿವಾಸ ಅವರ ಮನೆಮೇಲೆ ದಾಳಿ ನಡೆಸಿ ದೇವರ ಫೋಟೋ ವಿಗ್ರಹಗಳನ್ನು ದ್ವಂಸಗೊಳಿಸುವಾಗ,ಶರತ್ ಮಡಿವಾಳ, ಪ್ರಶಾಂತ್ ಸೇರಿದಂತೆ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಮಾಡುವಾಗ ನೋವಾಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಿಮಿ ಸಂಘಟನೆಯ ಇನ್ನೊಂದು ರೂಪವೇ ಈ ಪಕ್ಷ ಮತ್ತು ಸಂಘಟನೆಗಳು. ದೇಶದ ಎಲ್ಲೇ ಭಯೋತ್ಪಾದಕ ಚಟುವಟಿಕೆ ನಡೆದರೆ ಅದಕ್ಕೆ ಮಂಗಳೂರಿನ ಲಿಂಕ್ ಇರುತ್ತದೆ. ಕಾಂಗ್ರೆಸ್ ನ ವಸಂತ ಬಂಗೇರ ಸಹಿತ ಯಾರೂ ದೇಶದ್ರೋಹದ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಯಾಕೆಂದರೆ ನಾಡಿದ್ದು ಗ್ರಾ.ಪಂ ಅಧ್ಯಕ್ಷ- ಉಪಾಧ್ಯಕ್ಷ ರ ಆಯ್ಕೆಯ ವೇಳೆ ಅವರಿಗೆ ಇವರ ಜೊತೆ ಒಳ ಒಪ್ಪಂದ ಬೇಕು. ಹಾಗೇನಾದರೂ ಮಾಡಿದಲ್ಲಿ ನಿಮ್ಮನ್ನೂ ರಾಷ್ಟ್ರ ದ್ರೋಹದ ಪಕ್ಷ ಎಂದು ಕರೆಯುತ್ತೇವೆ. ಇನ್ನು ಮುಂದೆ ಈ ರೀತಿ ಎಲ್ಲಾದರೂ ಪಾಕ್ ಘೋಷಣೆ ಮೊಳಗಿದರೆ ಅಲ್ಲೇ ಇರುವ ಅವರ ಕಚೇರಿಗಳನ್ನು ದ್ವಂಸಗೊಳಿಸಬೇಕು. ಆಗ ಅವರಿಗೆ ಪರಿಣಾಮ ಗೊತ್ತಾಗುತ್ತದೆ.
ಎಲ್ಲಾದರೂ ಒತ್ತಡಕ್ಕೆ ಮಣಿದು ಬಂಧಿತರನ್ನು ಬಿಡುಗಡೆಗೊಳಿಸಿದ್ದೀರೆಂದಾದರೆ ಜಿಲ್ಲೆಯ ಎಲ್ಲಾ ಠಾಣೆಗಳ ಎದುರು ಪ್ರತಿರೋಧ ಸಭೆ ನಡೆಸಲಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ತಾಲೂಕಿನ ಸುಣ್ಣದ ಕೆರೆಯನ್ನು ಸುನ್ನತ್‌ಕೆರೆ ಮಾಡಿದರು. ನರಸಿಂಹ ಘಡವನ್ನು ಜಮಾಲಾಬಾದ್ ಮಾಡಿದರು. ನಾವು ನಮ್ಮ ಧಾರ್ಮಿಕ ವಿಧಿಗೆ ಅಲ್ಲಿಗೆ ಹೋಗಬಾರದಂತೆ. ಆದರೆ ಅವರ ಮಸೀದಿ ಅಲ್ಲಿರಬಹುದಂತೆ. ಇದ್ಯಾವ ನ್ಯಾಯ.ಶಾಸಕ ಹರೀಶ್ ಪೂಂಜ ಯಾಕೆ ಸೌಮ್ಯ ಸ್ವಭಾವದಿಂದ ವರ್ತಿಸುತ್ತಿದ್ದಾರೆ ತಿಳಿಯದು. ಬಳಿಕ ನೀವು ಮಾತನಾಡಿರಬಹುದು ಆದರೆ ಘೋಷಣೆ ಕೂಗಿದವರ ಎದುರೇಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ನಾಡಿನ ಮಠಮಾನ್ಯರು ಎಲ್ಲೆಲ್ಲೋ ಧರ್ಮರಕ್ಷಣೆ ಕಾರ್ಯ ಮಾಡುವ ಬದಲು ಒಬ್ಬೊಬ್ಬ ಸಾದು ಸಂತರುಗಳು ನಮ್ಮ ಕಾರ್ಯಕರ್ತರು ತಲಾ 25 ಮಂದಿಯಂತೆ ಸಾಕಲಿ. ಅವರ ಲವ್ ಜಿಹಾದ್‌ಗೆ ನಾವೇ ಪ್ರತ್ಯುತ್ತರ ನೀಡುತ್ತೇವೆ. ದೇಶದ್ರೋಹ ಕೃತ್ಯ ಮಾಡುವವರನ್ನು ಪೊಲೀಸರೇ ಗುಂಡಿಕ್ಕಿ ಕೊಲ್ಲಬೇಕು. ಗಡಿಪಾರು ಮಾಡಬೇಕು. ಆಗ ನಾವು ನಿಮ್ಮನ್ನು ಮೆಚ್ಚುತ್ತೇವೆ ಎಂದರು.
ಸಭೆಯಲ್ಲಿ ಡಾ. ಪ್ರಸನ್ನ ಮಾತನಾಡಿದರು. ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಸಂತೋಷ್ ಅತ್ತಾಜೆ, ಬೆಳಾಲು ತಿಮ್ಮಪ್ಪ ಗೌಡ, ಉಪಸ್ಥಿತರಿದ್ದರು.
ನವೀನ್ ನೆರಿಯ ಕಾರ್ಯಕ್ರಮ ನಿರೂಪಿಸಿದರು.