Posts

ಗಂಡಿಬಾಗಿಲಿನಲ್ಲಿ ಮರ್ಡರ್ ಪತಿಯಿಂದಲೇ ಪತ್ನಿಯ ಕೊಲೆ

0 min read

ಬೆಳ್ತಂಗಡಿ: ತಾಲೂಕಿನ ನೆರಿಯ   ಗಂಡಿಬಾಗಿಲು ಎಂಬಲ್ಲಿ ಕುಡಿದ ಮತ್ತಿನಲ್ಲಿ ಪತಿಯೇ ತನ್ನ ಪತ್ನಿಯನ್ನು ಹೊಡೆದು ಸಾಯಿಸಿದ ಘಟನೆ ನಡೆದಿದೆ.

ಸೌಮ್ಯಾ ಫ್ರಾನ್ಸಿಸ್ (40ವ.) ಕೊಲೆಯಾಗಿದವರಾಗಿದ್ದು,  ಆಕೆಯ ಪತಿ ಜಾನ್ಸನ್ (47ವ) ಕೊಲೆಗೈದವನು. ಘಟನೆ ನಡೆದ ಕೆಲವೇ ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಮೂಲತಃ ಕೇರಳದ ಇರುಟ್ಟಿ ನಿವಾಸಿಯಾಗಿರುವ ದಂಪತಿ ಗಂಡಿಬಾಗಿಲು ಸಮೀಪ ಜಮೀನು ಹೊಂದಿದ್ದು, ಇಬ್ಬರು ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ಪತಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದುದು ಸಾಮಾನ್ಯವಾಗಿತ್ತು. ಇದೇ ಜಗಳ ತಾರಕಕ್ಕೇರಿ ಗುರುವಾರ ಆತ ಪತ್ನಿಗೆ ಕಟ್ಟಿಗೆಯ ತುಂಡಿನಲ್ಲಿ ಹೊಡೆದು ಗಾಯಗೊಳಿಸಿದ್ದ. ಗಂಭೀರ ಗಾಯಗೊಂಡಿದ್ದ ಪತ್ನಿಯನ್ನು ಆತನೇ ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಸಾಗುವ ದಾರಿಮಧ್ಯೆ ಆಕೆ  ಮೃತಪಟ್ಟಿದ್ದಾರೆ.


ದಂಪತಿಗೆ ಇವರಿಗೆ 10 ವರ್ಷದ ಹೆಣ್ಣು ಮಗುವೊಂದಿದೆ.

ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಸಬ್ ಇನ್ಸ್‌ಪೆಕ್ಟರ್ ಪವನ್ ನಾಯ್ಕ್ ಅಗತ್ಯ ಕ್ರಮಗಳನ್ನು ಜರುಗಿಸಿದ್ದಾರೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment