ಬೆಳ್ತಂಗಡಿ; ಪಾರಸ್ ಫೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ವಜ್ರ ಹಾಗೂ ರತ್ನಾಭರಣಗಳ ಮಹಾಮೇಳಕ್ಕೆ ಚಾಲನೆ ದೊರೆತಿದೆ.
ಸಾಂಪ್ರದಾಯಿಕ ಹಾಗೂ ನೂತನ ಶೈಲಿಯ ಆಭರಣಗಳ ಪ್ರದರ್ಶನ ಹಾಗೂ 25 ಶೇಕಡಾ ವಿಶೇಷ ಕೊಡುಗೆಯ ಈ ಮೇಳವನ್ನು ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್, ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದಿನೇಶ್ ಚೌಟ ಚಾಲನೆ ನೀಡಿದರು.
ಈ ಸಮಾರಂಭದಲ್ಲಿ ಗ್ರಾಹಕರಾದ ಚಂದ್ರಕಲಾ ರತ್ನರಾಜ್, ಪಾರಸ್ ಪೃಥ್ವಿ ಜ್ಯುವೆಲ್ಸ್ ನಿರ್ದೇಶಕ ಆಶಿಶ್ ಕುಮಾರ್ ದಕ್ ಉಪಸ್ಥಿತರಿದ್ದರು.
ಸಂಸ್ಥೆಯ ವ್ಯವಸ್ಥಾಪಕ ಉಮಾನಾಥ ಪ್ರಭು, ಸೀನಿಯರ್ ಸೇಲ್ಸ್ ಎಕ್ಸ್ ಕ್ಯೂಟಿವ್ಸ್ ಗಳಾದ ಹರಿಪ್ರಸಾದ್ ಪ್ರಭು ಮತ್ತು ಪ್ರಮೀಳಾ ಶೆಟ್ಟಿ, ಸೇಲ್ಸ್ ಎಕ್ಸ್ ಕ್ಯೂಟಿವ್ಸ್ ಕೃಷ್ಣಪ್ಪ, ದಿನೇಶ್ ಆಚಾರ್ಯ, ಜೂನಿಯರ್ ಎಕ್ಸ್ ಕ್ಯೂಟಿವ್ಸ್ ಗಳಾದ ಗುರುಪ್ರಸಾದ್ ಆಚಾರ್ಯ, ರಕ್ಷಾ,ಸತೀಶ್, ಅಕೌಂಟೆಂಟ್ ಪ್ರಸಾದ್ ಕುಮಾರ್ ಭಾಗಿಯಾಗಿದ್ದರು. ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.