Posts

ಭಜನಾ ಮಂದಿರಗಳಿಗೆ ಜಾಗ ಮೀಸಲಿಡುವಂತೆ ಕಂದಾಯ ಸಚಿವರಿಗೆ ಹರೀಶ್ ಪೂಂಜ ಮನವಿ

0 min read

ಬೆಳ್ತಂಗಡಿ;  ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಎಲ್ಲಾ ಜಿಲ್ಲೆಗಳಲ್ಲೂ ಇರುವ ಭಜನಾ ಮಂದಿರಗಳಲ್ಲಿ ಸುಮಾರು ದಶಕಗಳಿಂದ ಹಿಂದೂ ಭಾಂದವರು ಶ್ರದ್ದಾ ಭಕ್ತಿಯಿಂದ ಭಜನೆ, ದೇವತಾ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇವುಗಳಲ್ಲಿ ಹೆಚ್ಚಿನ ಭಜನಾ ಮಂದಿರದ ಜಾಗಗಳಿಗೆ ಸೂಕ್ತ ದಾಖಲೆಗಳಿಲ್ಲದೆ ಕಂದಾಯ ಇಲಾಖೆಯ  ಜಾಗದಲ್ಲಿದೆ. 

ಈ ಸಲುವಾಗಿ ರಾಜ್ಯದ ಎಲ್ಲಾ ಭಜನಾ ಮಂದಿರಗಳಿಗೂ ಕಂದಾಯ ಇಲಾಖೆಯ ವತಿಯಿಂದ ಸೂಕ್ತ ದಾಖಲೆಗಳನ್ನು ಒದಗಿಸಿ ಕೊಡಬೇಕೆಂದು ಕಂದಾಯ ಸಚಿವರಾದ  ಅರ್ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ಶಾಸಕರಾದ  ಹರೀಶ್ ಪೂಂಜರವರು ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುನಿಲ್ ನಾಯ್ಕ್ ಜೊತೆಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment