ಜಿಲ್ಲಾಧ್ಯಕ್ಷರ ನಿಯೋಗ ಭೇಟಿ
ಮಂಗಳೂರು; ದುಷ್ಕರ್ಮಿಗಳಿಂದ ಹತ್ಯೆಯಾದ ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಮನೆಗೆ ದ. ಕ. ಜಿಲ್ಲಾ ವಕ್ಫ್ ಮಂಡಳಿ ಚೆಯರ್ಮೆನ್ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರ ದೂರವಾಣಿ ಮೂಲಕ ಫಾಝಿಲ್ ಅವರ ತಂದೆಯವರ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಚೆಯರ್ಮೆನ್ ಮೌಲಾನ ಎನ್. ಕೆ. ಎಂ. ಶಾಫಿ ಸಅದಿ ಬೆಂಗಳೂರು ಅವರು ಸಾಂತ್ವಾನ ಹೇಳಿದರು.
ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಮೌಲಾನಾ NKM ಶಾಫಿ ಸಅದಿಸಂದರ್ಭದಲ್ಲಿ ಮಾತನಾಡಿದ ವಕ್ಫ್ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ರಾಜ್ಯಾಧ್ಯಕ್ಷ ಮೌಲಾನಾ ಶಾಫಿ ಸಅದಿ ಉಸ್ತಾದರು ಅಗತ್ಯ ಸರಕಾರಿ ಕೆಲಸ ಮತ್ತು ವಕ್ಫ್ ಮಂಡಳಿಯ ಕೆಲಸದ ಒತ್ತಡಿದಂದ ಇಲ್ಲಿಗೆ ಬರುವುದು ವಿಳಂಬವಾಗಿದ್ದು ಈ ವಾರದಲ್ಲಿ ಅಧಿಕೃತ ಭೇಟಿ ನೀಡುವ ಭರವಸೆ ನೀಡಿದರು. ಅಲ್ಲದೆ ಫಾಝಿಲ್ ಕುಟುಂಬಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಹಾಯ ಮಾಡಲಿದ್ದೇವೆ ಎಂದು ಭರವಸೆ ನೀಡಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಬಿ. ಕೆ. ಸಿರಾಜುದ್ದೀನ್, ಹಿದಾಯತ್ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.