ವಸಂತ ಬಂಗೇರರಿಂದ ಸನ್ಮಾನ
ಬೆಳ್ತಂಗಡಿ; ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಳಿಯ ಗ್ರಾಮದ ಸರಕಾರಿ ಸಂಯುಕ್ತ ಪ. ಪೂ ಕಾಲೇಜು ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಅವರಿಗೆ ಗೇರುಕಟ್ಟೆ ಶಾಲೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಪ್ರಾಂಶುಪಾಲ ರಾಜೇಂದ್ರಕೃಷ್ಣ ಸ್ವಾಗತಿಸಿ ಪ್ರಸ್ತಾವನೆಗೈದರು.
ಕಾರ್ಯಕ್ರಮದಲ್ಲಿ ಕಳಿಯ ಗ್ರಾ.ಪಂ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಸದಸ್ಯರಾದ ಕೆ. ಎಮ್ ಅಬ್ದುಲ್ ಕರೀಮ್ ಗೇರುಕಟ್ಟೆ, ಮರಿಟಾ ಪಿಂಟೋ, ಶ್ವೇತಾ, ಮೋಹಿನಿ ಮತ್ತು ಪುಷ್ಪಾ, ತಾ.ಪಂ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಕಳಿಯ, ಮುಖಂಡರಾದ ಸಲೀಂ ಗುರುವಾಯನಕೆರೆ, ಬಿ.ಕೆ ವಸಂತ, ಉಮೇಶ್ ಬಳ್ಳಿದಡ್ಡ, ಪ್ರಭಾಕರ್ ಶಾಂತಿಕೋಡಿ, ಡಿ.ಕೆ ಅಯೂಬ್, ಸತೀಶ್, ಸಹಶಿಕ್ಷಕಕರಾದ ಸತೀಶ್ ಬಂಗೇರ, ಮಮತಾ, ಕಿಶೋರಿ, ಶಿವಶಂಕರ್, ಜ್ಯೋತಿ, ವಿಜಯಾ, ಜೋಸ್ಟಿನ್ ಅಮಿತಾ ಫರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.