ಸೇಲ್ಸ್ ಏಂಡ್ ಸರ್ವಿಸ್ ಶೋರೂಮ್
ಉದ್ಘಾಟನೆ ಪ್ರಯುಕ್ತ ಆಫರ್‌ಗಳ ಸುರಿಮಳೆ
ಮೊಬೈಲ್ ಮಾರಾಟ ಮತ್ತು ಸರ್ವಿಸ್ ಕ್ಷೇತ್ರದಲ್ಲಿ ಸುದೀರ್ಘ10 ವರ್ಷಗಳ ಅನುಭವ ಮತ್ತು ಗ್ರಾಹಕರ ಮನಗೆದ್ದಿರುವ ಹೈಟೆಕ್ ಮೊಬೈಲ್ಸ್ ಸಂಸ್ಥೆ ಉಜಿರೆ, ಮಡಂತ್ಯಾರು ಪಟ್ಟಣದಲ್ಲಿ ಈ ಹಿಂದಿನಿಂದಲೇ ಕಾರ್ಯಾಚರಿಸಿಕೊಂಡು ಬರುತ್ತಿದ್ದು ಈಗಾಗಲೇ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆಯಾಗಿ ಹೊರಹೊಮ್ಮಿದೆ.
ಇದೀಗ ಸಂಸ್ಥೆಯ ವಿನೂತನ ಶೈಲಿನ ವಿಶೇಷ ಮೊಬೈಲ್ ಶೋರೂಮ್ ಶೈಕ್ಷಣಿಕ ನಗರಿ ಉಜಿರೆಯಲ್ಲಿ ಗ್ರಾಹಕರ ಬಹು ಅಪೇಕ್ಷೆಗಣುಗುವಾಗಿ ಆರಂಭವಾಗುತ್ತಿದೆ.
ಆಫರ್ ಗಳ ಸುರಿಮಳೆ;
ಉದ್ಘಾಟನೆಯ ಪ್ರಯುಕ್ತ ನೂತನ ಮಳಿಗೆಯಲ್ಲಿ ಯಾವುದೇ ಮುಂಗಡ ಪಾವತಿಸದೆ ಸ್ಮಾರ್ಟ್‌ಪೋನ್ ಪಡೆಯುವ ಸುವರ್ಣಾವಕಾಶವಿದೆ. ಪ್ರತೀ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ವಿಷೇಶ ಉಡುಗೊರೆ ದೊರೆಯಲಿದೆ. ಎಲ್ಲಾ ಮೊಬೈಲ್ ಫೋನ್ ಗಳೂ ಆನ್ಲೈನ್ ದರಕ್ಕಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಕೈಗೆ ಸಿಗುವಂತೆ ಮಾಡಲಾಗಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮಳಿಗೆಗೆ ಭೇಟಿನೀಡಿ ಅದೃಷ್ಟ ಕೂಪನ್ ಡ್ರಾದಲ್ಲಿ ಭಾಗವಹಿಸಿ ಆಕರ್ಷಕ ವಿವೋ ಮೊಬೈಲ್ ಫೋನ್ ನಿಮ್ಮದಾಗಿಸಿಕೊಳ್ಳಬಹುದು.
ನೂತನ ಸಂಸ್ಥೆಯಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಮಾರಾಟ ಮತ್ತು ಸರ್ವಿಸ್, ಸ್ಮಾರ್ಟ್ ಫೋನ್‌ಗಳನ್ನು ಸುಲಭ ಕಂತುಗಳಲ್ಲಿ ಪಡೆಯುವ ಅವಕಾಶ, ಮೊಬೈಲ್ ಕವರ್, ಮೆಮೊರಿ ಕಾರ್ಡ್, ಪೆನ್ ಡ್ರೈ ಮತ್ತು ಮೊಬೈಲ್ ಗಳ ಬಿಡಿಭಾಗಗಳು ಲಭ್ಯವಿದೆ. ಐ.ಫೋನ್, ಒನ್‌ಪ್ಲಸ್, ಸೇಮ್ಸಂಗ್, ವಿವೋ, ಓಪ್ಪೋ, ರೆಡ್ಮಿ, ರಿಯಲ್ ಮೀ ಮೊದಲಾದ ಬ್ರಾಂಡೆಡ್ ಕಂಪೆನಿಯ ಫೋನ್ ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ.
ನೂತನ ಸಂಸ್ಥೆಯನ್ನು ಸಯ್ಯಿದ್ ಕಾಜೂರು ತಂಙಳ್, ಕಾವಳಕಟ್ಟೆ ಡಾಕ್ಟರ್ ಹಝ್ರತ್ ಆಶೀರ್ವದಿಸಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಎಸ್.ಎಂ ತಂಙಳ್ ಉಜಿರೆ, ಹಾಜಿ ಬಿ.ಎಮ್ ಹಮೀದ್ ಉಜಿರೆ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಹೈದರ್ ನೀರ್ಸಾಲ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಬಿ.ಎಮ್ ಇಲ್ಯಾಸ್ ಮಾಚಾರ್, ಉಸ್ಮಾನ್ ಹೆಚ್ ಉಜಿರೆ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಸ್ಥೆಯ ಮಾಲಿಕ ಮುಹಮ್ಮದ್ ಶರೀಫ್ ಹೈಟೆಕ್ ತಿಳಿಸಿದ್ದು ಎಲ್ಲಾ ಹ್ರಾಹಕರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.