Posts

ಇಂಧನ ಬೆಲೆ ಏರಿಕೆ- ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ

1 min read


ಬೆಳ್ತಂಗಡಿ; ಕೊರೊನ ಎರಡನೇ ಅಲೆಯ ಪರಿಣಾಮವಾಗಿ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನ ನಡುವೆ ಜನಸಾಮಾನ್ಯರ ಬದುಕು, ಜೀವನ ನಿರ್ವಹಣೆ ದುಸ್ತರವಾಗಿರುವ ಈ ವಿಷಮ ಪರಿಸ್ಥಿತಿಯ ನಡುವೆ ತೈಲ ಉತ್ಪನ್ನಗಳಿಗೆ ಮೂಲಬೆಲೆಯ ಮೂರುಪಟ್ಟು ಅಧಿಕ ತೆರಿಗೆ ವಿಧಿಸಿ ಜನಸಾಮಾನ್ಯರ ಬದುಕನ್ನೇ ಹೈರಾಣಾಗಿಸಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆಯು ಈ ದಿನ ಬೆಳ್ತಂಗಡಿ ಹಾಗೂ ಉಜಿರೆಯ ಪೆಟ್ರೋಲ್ ಬಂಕ್‌ಗಳಲ್ಲಿ  ನಡೆಯಿತು.


ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ  ಕೆ ವಸಂತ ಬಂಗೇರ ಮಾತನಾಡಿ,  ಮೋದಿ ಆಡಳಿತದಿಂದ ಜನಸಾಮಾನ್ಯರು ಬದುಕಲು ಅಸಾದ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊಂದಿದ್ದು ಕೇವಲ ಮಾದ್ಯಮ ಪ್ರಚಾರದ ಮೂಲಕ ಜನಸಾಮಾನ್ಯರ ಹಕ್ಕು, ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿವೆ ಎಂದರು.

ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಮಾತನಾಡಿ, ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ‌ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರದ ವಿರುದ್ಧ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ಈ ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಸಮಿತಿಯ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಗದೀಶ್ ಡಿ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಕಾಂಗ್ರೆಸ್ ಯುವ ಮುಖಂಡ ಅಭಿನಂದನ್ ಹರೀಶ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅನಿಲ್ ಪೈ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ದಯಾನಂದ ಬೆಳಾಲು, ಪ್ರವೀಣ್ ವಿ.ಜಿ, ಉಭಯ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರುಗಳಾದ ಡಿ.ಕೆ ಆಯೂಬ್,ಅಶ್ರಫ್ ನೆರಿಯ,ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ,ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಶರತ್,ಸಾಮಾಜಿಕ ಜಾಲತಾಣ ನಗರ ಅಧ್ಯಕ್ಷ ಸಂದೀಪ್ ಎಸ್ ನೀರಲ್ಕೆ ಅರ್ವ,ನಗರ ಪಂಚಾಯತ್ ಸದಸ್ಯ ಜನಾರ್ದನ,ನಗರ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್,ಎಪಿಎಂಸಿ ಮಾಜಿ ಅಧ್ಯಕ್ಷ ಭರತ್,ಪ್ರಮುಖರಾದ ಜಯವಿಕ್ರಮ ಕಲ್ಲಾಪು,ಪ್ರಭಾಕರ್ ಶಾಂತಿಕೋಡಿ,ಗ್ರಾಮೀಣ ಬ್ಲಾಕ್ ಸಾಮಾಜಿಕ ಜಾಲತಾಣದ ಚಂದ್ರಶೇಖರ್ ಗೌಡ,ಅಜಯ್ ಮಟ್ಲ,ಇಂಟಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನವೀನ್ ಗೌಡ,ಅನೂಪ್ ಬಂಗೇರ, ಕಾಂಗ್ರೆಸ್ ಸೇವಾದಳದ ಗಣೇಶ್ ಕಣಿಯೂರು,ಪ್ರಜ್ವಲ್ ಜೈನ್,ಬಾಲಕೃಷ್ಣ ಉಜಿರೆ,ಶ್ರೀನಿವಾಸ ಉಜಿರೆ,ಪ್ರೇಮ್ ಉಜಿರೆ,ವಸಂತ ಮೇಲಂತಬೆಟ್ಟು,ಸಂತೋಷ್ ಕುಂಡದಬೆಟ್ಟು,ಶ್ರೀದರ ಪೂಜಾರಿ ಉಜಿರೆ,ಸ್ಟೀವನ್ ಮೋನಿಸ್ ಕುಕ್ಕೇಡಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಈ ಪ್ರತಿಭಟನೆಯ ಜೊತೆಗೆ ವಾಹನಗಳ ಸವಾರರಿಗೆ ಪೆಟ್ರೋಲ್ ನಾಟ್ ಔಟ್ 100ರ ಮೋದಿ ಸರಕಾರದ ಸಾಧನೆಯನ್ನು ಅಣಕಿಸಿ ಕೇಕ್ ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಕೊರೊನ ನಿಯಮಾವಳಿಗಳಿಗೆ ಅನುಗುಣವಾಗಿ ಸುರಕ್ಷತಾ ಅಂತರ ಹಾಗೂ ಮಾಸ್ಕ್ ಧಾರಣೆಯ ಮೂಲಕ ಪ್ರತಿಭಟನೆ ನಡೆದಿದ್ದು,ಬೆಳ್ತಂಗಡಿಯ ಭಾರತ್ ಪೆಟ್ರೋಲಿಯಂ ಕೇಂದ್ರದಲ್ಲಿ ಪ್ರತಿಭಟನೆ ಆರಂಭಗೊಂಡು ಉಜಿರೆಯ ಪಿ.ಸಿ ಪೈ ಪೆಟ್ರೋಲಿಯಂ ಕೇಂದ್ರದಲ್ಲಿ ಸಮಾಪ್ತಿಯಾಯಿತು.


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment