ಬೆಳ್ತಂಗಡಿ; ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಇದರ ವ್ಯವಸ್ಥಾಪಕ ಉಮಾನಾಥ ಪ್ರಭು ಅವರು ತಮ್ಮ ಹುಟ್ಟುಹಬ್ಬವನ್ನು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿರುವ ಕೋವಿಡ್ ಮತ್ತು ಇತರ ರೋಗ ಬಾಧಿತರಿಗೆ ಶುಕ್ರವಾರ ಹಣ್ಣುಹಂಪಲು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಕರ್ತವ್ಯ ವೈದ್ಯಾಧಿಕಾರಿ ಡಾ. ಶಶಾಂಕ್ ಕುಂಬ್ಳೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೆಗ, ಆಸ್ಪತ್ರೆ ಸಿಬ್ಬಂದಿಗಳು, ಹರಿಪ್ರಸಾದ್ ಪ್ರಭು, ಪ್ರಸಾದ್, ಮುಹಮ್ಮದ್ ನಿಸಾರ್ ಗುರುವಾಯನಕೆರೆ ಮೊದಲಾದವರು ಉಪಸ್ಥಿತರಿದ್ದರು.