ಬೆಳ್ತಂಗಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಜಿರೆ ವಲಯ ಇದರ ಕೊರೋನ ವಾರಿಯರ್ಸ್ ನೇತೃತ್ವದಲ್ಲಿ, ಕೋವಿಡ್ ನಿಂದ ಮೃತಪಟ್ಟ ಉಮರಬ್ಬ ಉಜಿರೆಯವರ ಅಂತ್ಯಕ್ರಿಯೆಯನ್ನು ಉಜಿರೆ ಹಳೇಪೇಟೆ ಮುಹಿಯುದ್ದೀನ್ ಜುಮ್ಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಸಲಾಯಿತು.
ಒಂದುವಾರದ ಹಿಂದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಉಮರಬ್ಬ ರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಮರಣ ಹೊಂದಿದರು.
ಆಸ್ಪತ್ರೆಯ ವೆಚ್ಚವನ್ನು ಮನ್ನಾ ಮಾಡುವುದರಿಂದ ಹಿಡಿದು, ಮಂಗಳೂರಿನಿಂದ ಉಜಿರೆಗೆ ಮೃತಶರೀರವನ್ನು ಸಾಗಿಸಲು ಉಚಿತ ಆಂಬುಲೆನ್ಸ್ ವ್ಯವಸ್ಥೆ, ಕಫನ್ ಬಟ್ಟೆ ಹಾಗೂ ಪಿ.ಪಿ. ಇ ಕಿಟ್ ಸಹಿತ ಎಲ್ಲಾ ಸೇವೆಗಳೊಂದಿಗೆ ದಫನ ಕಾರ್ಯವನ್ನು ನೆರವೇರಿಸಿ ಕೊಟ್ಟರು.
ಪಿಎಫ್ಐ ಉಜಿರೆ ವಲಯಾಧ್ಯಕ್ಷ ಮಹಮ್ಮದ್ ಅಲೀ ಮಾರ್ಗದರ್ಶನದಂತೆ ಫಝಲ್, ಝಮೀರ್, ಸಲೀಮ್, ಅಶ್ರಫ್ ಚಾರ್ಮಾಡಿ, ಆಸ್ಫಾನ್ ಗಾಂಧಿನಗರ, ಅಝಮ್ ಕುಂಟಿನಿ ನೇತೃತ್ವ ವಹಿಸಿದ್ದರು.