Posts

ಜೀವರಕ್ಷಕ ಅಂಬುಲೆನ್ಸ್ ಚಾಲಕ ಹಮೀದ್ ಅವರ ತಂದೆ ಮೊಯಿದಿನ್ ಲಾಯಿಲ ನಿಧನ



ಎಚ್.ಎಂ ಮೊಯಿದಿನ್, ಆದರ್ಶನಗರ ಲಾಯಿಲ

ಬೆಳ್ತಂಗಡಿ: ನಗರದ ಹಿರಿಯ ರಿಕ್ಷಾ ಚಾಲಕ, ಸಾಮಾಜಿಕ ಮುಂದಾಳು ಹೆಚ್.ಎಂ ಮೊಯಿದಿನ್ ಲಾಯಿಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು.


ಕೆಲದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ವಿವಿಧ ಚಿಕಿತ್ಸೆ ನೀಡಲಾದರೂ ಅವರು ಗುರುವಾರ ಅಸುನೀಗಿದರು.

ರಿಕ್ಷಾ ಚಾಲಕರಾಗಿ ಎಲ್ಲರ ಪರಿಚಿತರಾಗಿದ್ದ ಮೊಯಿದಿನ್ ಅವರು ಸಮಾಜ ಸೇವಕರೂ ಆಗಿದ್ದರು.

ಕಠಿಣ ದುಡಿಮೆಯ ಆದರ್ಶದೊಂದಿಗೆ ಕ್ರಿಯಾಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು. ಲಾಯಿಲ ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಯಾಗಿ, ಲಾಯಿಲ ಪಂಚಾಯತ್ ಸದಸ್ಯರಾಗಿ ಸೇರಿದಂತೆ ಸಂಘ ಸಂಸ್ಥೆಗಳಲ್ಲಿ ಸೇವೆ ನೀಡಿದ್ದರು.

ಮೃತರ ಅಂತ್ಯಸಂಸ್ಕಾರ ವಿಧಿಗಳು ಶುಕ್ರವಾರ ಕಿಲ್ಲೂರು ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.


ತಂದೆ ಮೊಯಿದಿನ್ ಜೊತೆಗೆ ಹಮೀದ್

(ಜೂನ್ 19 ರ ವಿಶ್ವ ಅಪ್ಪಂದಿರ ದಿನದಂದು "ಹಮೀದ್ ಅಮ್ಮಿ" ಅವರು ತನ್ನ ತಂದೆಯ ಬಗ್ಗೆ ಹೀಗೆ ಬರೆದುಕೊಂಡಿದ್ದರು)

ಎಲ್ಲರಂತೆಯೂ ನನ್ನ ಅಪ್ಪನೂ ನನ್ನ ಪಾಲಿಗೆ ಖಳನಾಯಕರಾಗಿದ್ದರು. ನಾನು ಏನೇ ಮಾಡಿದರೂ ಅದನ್ನು ಬಲವಾಗಿ ವಿರೋಧಿಸುವ "ವಿಲನ್" ಆಗಿದ್ದರು. ಸ್ನೇಹಿತರೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಯಾರೊಂದಿಗಾದರೂ ಆಟವಾಡಲು ಮನೆಯ ಗೇಟಿಂದ ಹೊರಗಡೆ ಹೋಗೋ ಹಾಗಿಲ್ಲ. ಆದರೆ ಅವರ ಅದೆಲ್ಲಾ ಗುಣಗಳು ಇಂದು ನನ್ನ ಜೀವನವನ್ನು ಬದಲಾಯಿಸಿದೆ. ನನ್ನ ಅಪ್ಪ ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು. ಯಾವುದರಲ್ಲಿಯೂ ಕೊರತೆಯಿಲ್ಲದೆ ನನ್ನನ್ನು ಬೆಳೆಸಿದವರು. ಆಟೋ ಓಡಿಸಿ ನನಗೆ ಅಗತ್ಯವಿರುವಷ್ಟು ವಿಧ್ಯಾಭ್ಯಾಸವನ್ನು ಧಾರೆಯೆರೆದವರು. ಹೆಚ್ಚಿನ ವಿಧ್ಯಾಭ್ಯಾಸ ಕಲಿಸುವ ಹಂಬಲ ಅವರಲ್ಲಿದ್ದರೂ ಕಲಿಯುವ ಹಂಬಲ ನನ್ನಲ್ಲಿರಲಿಲ್ಲ. ಇದಕ್ಕೆಲ್ಲ ಕಾರಣ ಅಂದು ಖಳನಾಯಕನಂತೆ ಕಂಡ ನಾಯಕತ್ವದ ನನ್ನ ಅಪ್ಪನ ಗುಣಗಳು. ನನ್ನ ಇಂದಿನ ಯಶಸ್ವಿಗೆ ಬೆನ್ನೆಲುಬಾಗಿ ನಿಂತು ನನ್ನನ್ನು ಪ್ರೋತ್ಸಾಹಿಸಿ ಹರಸಿ ಆಶಿರ್ವದಿಸಿದವರು ನನ್ನ ಅಪ್ಪ ಅಮ್ಮ. ಅಂದು ನನ್ನ ಬಾಲ್ಯದಲ್ಲಿ ವಿಲನ್ ಆಗಿದ್ದ ನನ್ನ ಅಪ್ಪ ಇಂದು ನನ್ನ ಬಾಳಿನಲ್ಲಿ ಹೀರೋ ಆಗಿದ್ದಾರೆ. ಭಗವಂತ ನನ್ನ ಅಪ್ಪ ಅಮ್ಮನಿಗೆ ಆಯೂರಾರೋಗ್ಯ ಧೀರ್ಘಾಯುಷ್ಯ, ಸುಖ ಶಾಂತಿ ನೆಮ್ಮದಿ ನೀಡಿ ಅನುಗ್ರಹಿಸಿ ನನ್ನ"ಮಾತಾ ಪಿತ್ರರಿಗೆ" ಸಮಾನರಾದ ಎಲ್ಲ ಹಿರಿಯರಿಗೂ "World Father's day" ದಿನದ ಶುಭಾಶಯಗಳು💐💐💐💐💐💐💐💐💐💐ammi..✍️

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official