ಬೆಳ್ತಂಗಡಿ; ಇಲ್ಲಿನ ಎಸ್‌ಡಿಎಂ ಕಾಲೇಜು ರಸ್ತೆಯಲ್ಲಿರುವ ಮಹಾವೀರ ಸೂಪರ್ ಮಾರ್ಕೆಟ್ ಬಳಿ, ಎಸ್.ಎಂ ಟವರ್ಸ್ ವಾಣಿಜ್ಯ ಮಳಿಗೆಯಲ್ಲಿ "ಹೈಟೆಕ್ ಮೊಬೈಲ್ ಶೋರೂಮ್" ಸೆಪ್ಟೆಂಬರ್30 ನೇ ಗುರುವಾರದಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.
ನೂತನ ಸಂಸ್ಥೆಯನ್ನು ಸಯ್ಯಿದ್ ಕಾಜೂರು ತಂಙಳ್, ಕಾವಳಕಟ್ಟೆ ಡಾಕ್ಟರ್ ಹಝ್ರತ್,ಕಟ್ಟಡದ ಮಾಲಿಕ ಸಯ್ಯಿದ್ ಎಸ್.ಎಂ ತಂಙಳ್ ಉದ್ಘಾಟಿಸಿ ದುಆ ಆಶೀರ್ವಾದಗೈದರು.ಹಾಜಿ ಬಿ.ಎಮ್ ಹಮೀದ್ ಉಜಿರೆ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಹೈದರ್ ನೀರ್ಸಾಲ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಬಿ.ಎಮ್ ಇಲ್ಯಾಸ್ ಮಾಚಾರ್, ಉಸ್ಮಾನ್ ಹೆಚ್ ಉಜಿರೆ, ಎಮ್.ಎ ಕಾಸಿಂ ಮುಸ್ಲಿಯಾರ್ ಮಾಚಾರ್, ವಿವೋ ಕಂಪೆನಿಯ ತಾಲೂಕು ಟೀಮ್ ಲೀಡರ್ ವರದರಾಜ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮೊಬೈಲ್ ಮಾರಾಟ ಮತ್ತು ಸರ್ವಿಸ್ ಕ್ಷೇತ್ರದಲ್ಲಿ ಸುದೀರ್ಘ10 ವರ್ಷಗಳ ಅನುಭವ ಮತ್ತು ಗ್ರಾಹಕರ ಮನಗೆದ್ದಿರುವ ಹೈಟೆಕ್ ಮೊಬೈಲ್ಸ್ ಸಂಸ್ಥೆ ಉಜಿರೆ ಮತ್ತು ಮಡಂತ್ಯಾರು ಪಟ್ಟಣದಲ್ಲಿ ಈ ಹಿಂದಿನಿಂದಲೇ ಕಾರ್ಯಾಚರಿಸಿಕೊಂಡು ಬರುತ್ತಿದ್ದು ಈಗಾಗಲೇ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.
ಇದೀಗ ಸಂಸ್ಥೆಯ ವಿನೂತನ ಶೈಲಿನ ವಿಶೇಷ ಮೊಬೈಲ್ ಶೋರೂಮ್ ಶೈಕ್ಷಣಿಕ ನಗರಿ ಉಜಿರೆಯಲ್ಲಿ ಗ್ರಾಹಕರ ಬಹು ಅಪೇಕ್ಷೆಗಣುಗುವಾಗಿ ಆರಂಭವಾಗಿದೆ.
ಆಫರ್ ಗಳ ಸುರಿಮಳೆ;
ಉದ್ಘಾಟನೆಯ ಪ್ರಯುಕ್ತ ನೂತನ ಮಳಿಗೆಯಲ್ಲಿ ಯಾವುದೇ ಮುಂಗಡ ಪಾವತಿಸದೆ ಸ್ಮಾರ್ಟ್‌ಪೋನ್ ಪಡೆಯುವ ಸುವರ್ಣಾವಕಾಶವಿದೆ. ಪ್ರತೀ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ವಿಷೇಶ ಉಡುಗೊರೆ ದೊರೆಯಲಿದೆ. ಎಲ್ಲಾ ಮೊಬೈಲ್ ಫೋನ್ ಗಳೂ ಆನ್ಲೈನ್ ದರಕ್ಕಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಕೈಗೆ ಸಿಗುವಂತೆ ಮಾಡಲಾಗಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಅದೃಷ್ಟ ಕೂಪನ್ ಡ್ರಾ ಇಟ್ಟುಕೊಳ್ಳಲಾಗಿದ್ದು ಅನೇಕ ಮಂದಿ ಗ್ರಾಹಕರು ಇದರಲ್ಲಿ ಭಾಗಿಯಾಗಿದ್ದರು.
ನೂತನ ಸಂಸ್ಥೆಯಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಮಾರಾಟ ಮತ್ತು ಸರ್ವಿಸ್, ಸ್ಮಾರ್ಟ್ ಫೋನ್‌ಗಳನ್ನು ಸುಲಭ ಕಂತುಗಳಲ್ಲಿ ಪಡೆಯುವ ಅವಕಾಶ, ಮೊಬೈಲ್ ಕವರ್, ಮೆಮೊರಿ ಕಾರ್ಡ್, ಪೆನ್ ಡ್ರೈ ಮತ್ತು ಮೊಬೈಲ್ ಗಳ ಬಿಡಿಭಾಗಗಳು ಲಭ್ಯವಿದೆ. ಐ.ಫೋನ್, ಒನ್‌ಪ್ಲಸ್, ಸೇಮ್ಸಂಗ್, ವಿವೋ, ಓಪ್ಪೋ, ರೆಡ್ಮಿ, ರಿಯಲ್ ಮೀ ಮೊದಲಾದ ಬ್ರಾಂಡೆಡ್ ಕಂಪೆನಿಯ ಫೋನ್ ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ.
ಉದ್ಘಾಟನೆಯ ಪ್ರಯುಕ್ತ ಸಂಸ್ಥೆಗೆ ಆಗಮಿಸಿದ ಆಹ್ವಾನಿತ ಗಣ್ಯರನ್ನು ಹಾಗೂ ಎಲ್ಲಾ ಗ್ರಾಹಕರನ್ನು ಸಂಸ್ಥೆಯ ಮಾಲಿಕ ಮುಹಮ್ಮದ್ ಶರೀಫ್ ಹೈಟೆಕ್ ಅವರು ಪ್ರೀತಿಯಿಂದ ಬರಮಾಡಿಕೊಂಡು ಗೌರವಿಸಿದರು.