ಬೆಳ್ತಂಗಡಿ; ನೆರಿಯ ಗ್ರಾಮದ ಸಿಯೊನ್ ಆಶ್ರಮದಲ್ಲಿ ಇತ್ತೀಚೆಗಿನ ಕೋವಿಡ್ ಉಲ್ಬಣಿಸಿದ ಪರಿಣಾಮವಾಗಿ ಸಿಯೊನ್ ಆಶ್ರಮದ ನಿರಾಶ್ರಿತರನ್ನು ಸರಕಾರದ ನಿರ್ದೇಶನದಂತೆ ಸ್ಥಳಾಂತರಿಸಿದ ಬೆನ್ನಿಗೇ ಎಲ್ಲರೂ ಗುಣಮುಖರಾಗುತ್ತಿದ್ದು, ಅವರೆಲ್ಲರೂ ಆಶ್ರಮಕ್ಕೆ ಮರಳುವ ಮುಂಚಿತವಾಗಿ ಇಲ್ಲಿ ಸ್ವಚ್ಛತಾ ಶ್ರಮದಾನಸೇವೆ ನಡೆಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಕೋವಿಡ್ ಟಾಸ್ಕ್ ಫೋರ್ಸ್ ಹಾಗೂ ಯುವಜನ ಒಕ್ಕೂಟ ಹಾಗೂ ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ ನೇತೃತ್ವದಲ್ಲಿ ಗುರುವಾರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿಯೋನ್ ಆಶ್ರಮ ಟ್ರಸ್ಟ್ ನ ಮಾನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್, ಆಡಳಿತಾಧಿಕಾರಿ ಸುಭಾಷ್, ಸಂಧ್ಯಾ ಇವರ ಮಾರ್ಗದರ್ಶನದಂತೆ ಕಾರ್ಯಕ್ರಮ ನಡೆಯಿತು.
ಸುಮಾರು 50 ಕ್ಕಿಂತ ಹೆಚ್ಚು ಎಸ್.ಎಂ.ವೈ.ಎಂ ಸದಸ್ಯರು ಹಾಗೂ 6 ಮಂದಿ ಧರ್ಮಗುರುಗಳ ಸಹಬಾಗಿತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.
ಧರ್ಮ ಪ್ರಾಂತ್ಯದ ಟಾಸ್ಕ್ ಫೋರ್ಸ್ ನ ಸಂಯೋಜಕ ವಂ.ಫಾ. ಬಿನೋಯಿ ಎ ಜೆ, ಸಹ ಸಂಯೋಜಕ ವಂ.ಫಾ. ಷಾಜಿ ಮಾತ್ಯು, ಎಸ್.ಎಂ.ವೈ.ಎಂ ನಿರ್ದೇಶಕ ವಂ.ಫಾ.ಚೀರನ್ ಜೋಸೆಫ್ , ವಂ.ಫಾ. ರೋಬಿನ್, ವಂ.ಫಾ.ಅಜಯ್, ವಂ.ಫಾ.ಕ್ರಿಸ್ಟಿ, ವಂ.ಫಾ ಸುನಿಲ್ ಮಾರ್ಗದರ್ಶನ ನೀಡಿದರು.
ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ ಚಾಂಡಿ, ಜೋಯ್, ಮನೋಜ್, ಸುಜನ್ ಥೋಮಸ್, ಬೇಬಿ ಇವರು ವ್ಯವಸ್ಥೆಗಳ ಮೇಲುಸ್ತುವಾರಿ ವಹಿಸಿದ್ದರು.