Posts

ಗರ್ಡಾಡಿ ನಂದಿಬೆಟ್ಟ ಬಳಿ ಅಪಘಾತಕ್ಕೆ ಹಿರೆಬಂಡಾಡಿಯ ಸಹೋದರರು ಬಲಿ





ಬೆಳ್ತಂಗಡಿ: ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟ ಬಳಿ ದ್ವಿಚಕ್ರ ವಾಹನಕ್ಕೆ ಕೆ.ಎಸ್. ಆರ್. ಟಿ. ಸಿ. ಬಸ್ ಡಿಕ್ಕಿ ಹೊಡೆದು ಹಿರೆಭಂಡಾಡಿಯ ಸಹೋದರರು  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.  ಮೃತರನ್ನು ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ, ಮರ್ಹೂಮ್ ಅಬ್ದುರ್ರಝಾಕ್ ಅವರ ಮಕ್ಕಳಾದ ಹಮ್ಮಬ್ಬ ಸಿರಾಜ್ ಮತ್ತು ಕುತುಬುದ್ದೀನ್ ಸಾದಿಕ್ ಎಂಬವರೆಂದು ಗುರುತಿಸಲಾಗಿದೆ.

ಗುರುವಾರವಷ್ಟೇ ವೇಣೂರಿನ ಅಂಗರಕರಿಯ ಎಂಬಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಸ್ವಂತ ಸಹೋದರಿಯ ಪತಿ (ಬಾವ) ಯ ಸಹೋದರನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಘಟನೆ ಆಗಿದೆ. 

ಅಪಘಾತ ಆದ ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು  ಸ್ಥಳೀಯ ಗೋಳಿಯಂಗಡಿಯ ಮುನೀರ್, ಲೆತೀಫ್  ಮೊದಲಾದರು ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು. 

ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಸ್ತರಾಗಿದ್ದು ಕಳೆದ ಐದು ತಿಂಗಳಿಂದ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

1 comment

  1. 😥😭
© Live Media News. All rights reserved. Distributed by Pixabin Official