ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿರ್ಗಮನ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಸ್ವಾಗತಿಸಿ ಪ್ರಥಮಾರ್ಧದ ಕಾರ್ಯಕ್ರಮ ನಿರೂಪಿಸಿದರು.
ನೂತನ ಸಮಿತಿಯ ಪದಗ್ರಹಣಾಧಿಕಾರಿಯಾಗಿ ಲಯನ್ ಜಿಲ್ಲೆಯ ದ್ವಿತೀಯ ಉಪರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ವಲಯಾಧ್ಯಕ್ಷ ವಸಂತ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ ಬಂಟ್ವಾಳ, ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರುಗಳಾದ ಸುಧೀರ್ ಭಂಡಾರಿ, ಮಾರ್ಟಿನ್ ಡಿಸಿಲ್ವಾ, ಆನಂದ ಸಿಂದೂರು, ವಿನೋದ್ ಬಿ ಸಾಲ್ಡಾನಾ, ನಿತಿನ್ ಪಚ್ಚೇರಿ, ಉಪಸ್ಥಿತರಿದ್ದರು.ಕಾರ್ಯದರ್ಶಿ ದತ್ತಾತ್ರಯ ವರದಿ ವಾಚಿಸಿದರು. ಕೋಶಾಧಿಕಾರಿ ಅನಂತಕೃಷ್ಣ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ವಸಂತ ಸುವರ್ಣ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ನೂತನ ಸಾಲಿನ ಅಧ್ಯಕ್ಷ ರಾಜೀವ ಡಿ. ಗೌಡ ಅವರು ಅಧಿಕಾರ ಪದ ಸ್ವೀಕರಿಸಿ, ದ್ವಿತೀಯಾರ್ಧದ ಕಾರ್ಯಕ್ರಮ ವನ್ನು ಮುಂದುವರಿಸಿದರು. ಕೃಷ್ಣ ಆಚಾರ್ ಪದಗ್ರಹಣಾಧಿಕಾರಿಯ ಪರಿಚಯ ಮಾಡಿದರು. ನಿರ್ಗಮನಾಧ್ಯಕ್ಷ ರವೀಂದ್ರ ಶೆಟ್ಟಿ ಅವರು ತನ್ನ ಅವಧಿಯ ಸಹಕಾರಕ್ಕಾಗಿ ಪದಾಧಿಕಾರಿಗಳನ್ನು ಅಭಿನಂದಿಸಿದರು.