Posts

ನಮ್ಮ ಸೇವೆ ನಮಗೆ ಮೊದಲು ತೃಪ್ತಿ ನೀಡುವಂತಿರಬೇಕು; ಧರಣೇಂದ್ರ ಕೆ‌ ಜೈನ್ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ


ಬೆಳ್ತಂಗಡಿ;‌ ಸೇವೆ ಸಲ್ಲಬೇಕಾದವರಿಗೆ ಸಲ್ಲಬೇಕು. ಅಗತ್ಯ ಇರುವವರಿಗೆ ಸಲ್ಲಬೇಕು. ನಾವು ಮಾಡುವ ಸೇವೆ ಮೊದಲು ನಮಗೇ ತೃಪ್ತಿ ತಂದಿರಬೇಕು. ಇದು ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಅಧ್ಯಕ್ಷರ ಧ್ಯೇಯ ಈ ವರ್ಷದ ಧ್ಯೇಯ ಕೂಡ ಹೌದು ಎಂದು ಹೇಳಿದರು.

ನ.13 ರಂದು ಲಯನ್ಸ್ ಕ್ಲಬ್ ಬೆಳ್ತಂಗಡಿ ಇಲ್ಲಿಗೆ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.


ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ಯರ್ಡೂರು ವಹಿಸಿದ್ದರು.

ವೇದಿಕೆಯಲ್ಲಿ ಲಯನ್ಸ್ ವಲಯಾಧ್ಯಕ್ಷ ವಸಂತ ಶೆಟ್ಟಿ ಉಪಸ್ಥಿತರಿದ್ದರು.‌ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಂತ್ಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಪ್ರಾಂತ್ಯಾಧ್ಯಕ್ಷರ ಬಗ್ಗೆ ಮಾಜಿ ಪ್ರಾಂತ್ಯಾಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕೃಷ್ಣ ಆಚಾರ್, ಮೇದಿನಿ ಡಿ ಗೌಡ ಅನಿಸಿಕೆ ವ್ಯಕ್ತಪಡಿಸಿದರು.




ಸುಶೀಲಾ ಎಸ್ ಹೆಗ್ಡೆ ಪ್ರಾರ್ಥನೆ ಹಾಡಿದರು. ಜಗನ್ನಾಥ ಶೆಟ್ಟಿ ಧ್ವಜ ವಂದನೆ ನಡೆಸಿಕೊಟ್ಟರು. ನೀತಿ ಸಂಹಿತೆಯನ್ನು ಅಶೋಕ್ ಕುಮಾರ್ ಬಿ.ಪಿ ವಾಚಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವೇದಿಕೆಯಲ್ಲಿದ್ದರು. ಕೋಶಾಧಿಕಾರಿ ಧತ್ತಾತ್ರೇಯ ಗೊಲ್ಲ ವಂದನಾರ್ಪಣೆಗೈದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official