Posts

ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಪ್ರಾಂತ್ಯ‌ 6 ರ ಪ್ರಾಂತ್ಯ ಸಮ್ಮೇಳನ || ಕೂಡುವಿಕೆಯಿಂದ ಸಮಾನತೆ ಬರುತ್ತದೆ; ಡಾ.‌ಹೆಗ್ಗಡೆ

2 min read

ಬೆಳ್ತಂಗಡಿ; ಕೂಡುವಿಕೆಯೇ ಸಂಸ್ಥೆಗಳ ಉದ್ಧೇಶ. ಇದರಿಂದ ಸಮಾನತೆ ಬರುತ್ತದೆ. ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಯಬೇಕಾದರೆ ಸಮಾನತೆ ಬೇಕಾಗುತ್ತದೆ.  ಸ್ವಾತಂತ್ರ್ಯ ಲಭಿಸಿದ 75 ವರ್ಷಗಳಲ್ಲಿ ಸಮಾಜದಲ್ಲಿ ಸಮಾನತೆ ಬಂದಿದೆ. ಜಾತೀಯತೆ ಮತ್ತು ಅಸ್ಪೃಶ್ಯತೆ ಯಿಂದ ಜನ ಹೊರಬಂದಿದ್ದು, ಇದುವೇ ಮಹತ್ವದ ಬದಲಾವಣೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಪ್ರಾಂತ್ಯ6 ರ ಪ್ರಾಂತ್ಯ ಸಮ್ಮೇಳನ "ಬೆಳ್ಳಿ ಬೆಳೆಯಲಿ ಲಯನಿಸಂ ಬಳ್ಳಿ" ಧ್ಯೇಯದೊಂದಿಗೆ ಮಾ.12 ರಂದು  ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಕಲಾ‌ ಮಂದಿರದಲ್ಲಿ ನಡೆದ ಪ್ರಾಂತೀಯ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಲಯನ್ಸ್ ಕ್ಲಬ್ ಇವತ್ತು 220 ಕ್ಕೂ‌ ಹೆಚ್ಚು ದೇಶಗಳಲ್ಲಿ ಬೆಳೆದಿದೆ. ಈ ಸಂಸ್ಥೆಯಲ್ಲಿ ಪ್ರತಿಭೆ ಗಳನ್ನು ಪ್ರಶಂಸಿಸುವ ಕಾರ್ಯ, ರಾಷ್ಟ್ರ ಪ್ರೇಮ ಮತ್ತು ಸಂಸ್ಕೃತಿ‌ ಬೆಳೆಸುವ ಧ್ಯೇಯ ಇದೆ. ನಮ್ಮ‌ ಜೀವನದಲ್ಲಿ ನಂಬಿಕೆ, ಶ್ರದ್ಧೆ, ಪ್ರಾಮಾಣಿಕತೆ ಬಹಳ ಮುಖ್ಯವಾಗಿದೆ. ಧನಾತ್ಮಕ ಪ್ರೇರಣೆ ಸಫಲತೆ ತಂದುಕೊಡುತ್ತದೆ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್ ವಹಿಸಿದ್ದು ಮನದಾಳದ ಮಾತುಗಳನ್ನಾಡಿದರು.

ಸಮ್ಮೇಳನವನ್ನು ಪ್ರಾಂತ್ಯದ ಪ್ರಥಮ  ಮಹಿಳೆ ಅನುಪಾ ಕುಮಾರಿ ಅವರು ಉದ್ಘಾಟಿಸಿ ಶುಭ ಕೋರಿದರು. 

ಸಮ್ಮೇಳದದ ವೇದಿಕೆಯಲ್ಲಿ ವಲಯಾಧ್ಯಕ್ಷರುಗಳಾದ ವಸಂತ ಶೆಟ್ಟಿ ಮತ್ತು ಮೆಲ್ವಿನ್ ಡಿಕೋಸ್ತಾ, ಬೆಳ್ತಂಗಡಿ ಆತಿಥೇಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ಹೇಮಂತ ರಾವ್ ಯರ್ಡೂರು, ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಧತ್ತಾರ್ತೇಯ ಗೊಲ್ಲ, ವಿವಿಧ  ಪ್ರಾಂತ್ರದ ಪ್ರಾಂತ್ಯಾಧ್ಯಕ್ಷರುಗಳು, ವಲಯಾಧ್ಯಕ್ಷರುಗಳು, ಸ್ಥಾಪಕ ಸದಸ್ಯ ವಿ.ಆರ್ ನಾಯ್ಕ್, ಪ್ರಾಂತ್ಯ ಸಮ್ಮೇಳನದ ಸ್ವಾಗತ ಸಮಿತಿ 

ಕಾರ್ಯದರ್ಶಿ ಕೃಷ್ಣ ಆಚಾರ್ಯ, ಕೋಶಾಧಿಕಾರಿ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯಾಧ್ಯಕ್ಷ ನಿತ್ಯಾನಂದ ನಾವರ, ಗೌರವ ಸಲಹೆಗಾರ ಪ್ರವೀಣ್ ಕುಮಾರ್ ಇಂದ್ರ ಇವರು ಉಪಸ್ಥಿತರಿದ್ದರು.

ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ‌ ನಿರೂಪಿಸಿದರು. 

ಸೀತಾಲಕ್ಷ್ಮೀ ದಿನೇಶದ ಕುಮಾರ್ ಪ್ರಾರ್ಥನೆ ಹಾಡಿದರು.

ರಾಷ್ಟ್ರಧ್ವಜಕ್ಕೆ ಗೌರವ ಮತ್ತು ರಾಷ್ಟ್ರಗೀತೆ ಜಗನ್ನಾಥ ಶೆಟ್ಟಿ ತಂಡದವರು ನಡೆಸಿಕೊಟ್ಟರು‌. ಧ್ವಜವಂದನೆಯನ್ನು ಕೆ.ಎಸ್.ಶೆಟ್ಟಿ ಮೂಡಬಿದಿರೆ ನಡೆಸಿಕೊಟ್ಟರು. 

ಪ್ರಾಂತ್ಯಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಸುಭಾಷಿಣಿ ಸಮ್ಮೇಳನ ಉದ್ಘಾಟಕರನ್ನು ಪರಿಚಯಿಸಿದರು. 

ರಾಷ್ಟ್ರ ಮಟ್ಟದ ಸಾಧಕರಾದ ಅಶ್ವಲ್ ರೈ, ಯಾಕೂಬ್ ಎಸ್, ತಿಲಕ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.  ಸಮ್ಮೇಳನದ ಸ್ಮರಣ ಸಂಚಿಕೆ 

'ಅಧೀಶ" ದ ಮುಖ ಪುಟದ ಅನಾವರಣ ನಡೆಯಿತು. ಸಂಚಿಕೆ ಬಗ್ಗೆ ವಿನ್ಸೆಂಟ್ ಟಿ ಡಿಸೋಜ ತಿಳಿಯಪಡಿಸಿದರು. 

ಪ್ರಾಂತೀಯ ಅಧ್ಯಕ್ಷ ದಂಪತಿಗೆ  ಸನ್ಮಾನ ನಡೆಯಿತು. ಪ್ರಶಂಸನಾ ಪತ್ರ ಸಮರ್ಪಣೆಯನ್ನು ವಸಂತ ಸುವರ್ಣ ನಡೆಸಿಕೊಟ್ಟರು. ಬ್ಯಾನರ್ ಪ್ರದರ್ಶನದ ಫಲಿತಾಂಶವನ್ನು ದೇವಿಪ್ರಸಾದ್ ಪ್ರಕಟಿಸಿದರು.  ಅದೃಷ್ಟ ವ್ಯಕ್ತಿಯ ಪ್ರತಿನಿಧಿ ಆಯ್ಕೆ ನಡೆಯಿತು. ವಿವಿಧ ಲಯನ್ಸ್ ಕ್ಲಬ್ ಗಳ ಮೂಲಕ ನಡೆಸಲಾದ ಸೇವಾ ಚಟುವಟಿಕೆಯನ್ನು ರಾಜು ಶೆಟ್ಟಿ ನಡೆಸಿಕೊಟ್ಟರು. ಪ್ರಾಂತ್ಯಾಧ್ಯಕ್ಷ ದಂಪತಿಗೆ ಸಮರ್ಪಿಸಿದ ಪ್ರಶಂಸನಾ ಪತ್ರವನ್ನು ವಸಂತ ಸುವರ್ಣ ವಾಚಿಸಿದರು. 

ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಮತ್ತು ದಿವ್ಯಾ ಶೆಟ್ಟಿ, ಪ್ರಥಮ ರಾಜ್ಯಪಾಲ ಸಂಜೀತ್ ಶೆಟ್ಟಿ, ದ್ವಿತೀಯ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಅವರನ್ನು ಅಭಿನಂದಿಸಲಾಯಿತು.  ಮಾಜಿ ರಾಜ್ಯ ಪಾಲರಾದ ಡಾ. ಗೀತ್‌ಪ್ರಕಾಶ್ ವಿಟ್ಲ, ಹೆಚ್.ಆರ್ ಹರೀಶ್, ರೊನಾಲ್ಡ್ ಐಸಾಕ್ ಗೂಮ್ಸ್ ಅವರು ಶುಭ ಹಾರೈಸಿದರು.

ಪ್ರಾಂತ್ಯ ಸಮ್ಮೇಳನ ಸಂಘಟನೆಗಾಗಿ  ಪದಾಧಿಕಾರಿಗಳನ್ನು, ಆತಿಥೇಯ ಕ್ಲಬ್ ನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಜಿಲ್ಲಾ ಸಂಪುಟದ ಪದಾಧಿಕಾರಿಗಳನ್ನೂ ಅಭಿನಂದಿಸಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment