Posts

ಹೆಲ್ಪ್ ಫಾರ್ ಸೋಮಂತಡ್ಕ ಬಳಗದಿಂದ ರಕ್ತದಾನ ಶಿಬಿರ: ಸನ್ಮಾನ

1 min read


ಬೆಳ್ತಂಗಡಿ; ಮುಂಡಾಜೆ ಗ್ರಾಮದಲ್ಲಿ ತುರ್ತು ಆವಶ್ಯಕತೆಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಕಳೆದ 10 ತಿಂಗಳ ಹಿಂದೆ ರಚಿತವಾಗಿರುವ "ಹೆಲ್ಪ್ ಫಾರ್ ಸೋಮoತ್ತಡ್ಕ ಚಾರಿಟಿ" ಆಶ್ರಯದಲ್ಲಿ ಬದ್ರಿಯಾ ಜುಮಾ ಮಸ್ಜಿದ್ ಸೋಮಂತಡ್ಕ ಇಲ್ಲಿ ರಕ್ತದಾನ ಶಿಬಿರ ‌ಹಾಗೂ ದಫನ ಕಾರ್ಯಾಚರಣೆಯಲ್ಲಿ ಸುದೀರ್ಘ ವರ್ಷದಿಂದ ತೊಡಗಿಸಿಕೊಂಡಿರುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಶಿಬಿರಕ್ಕೆ ಬದ್ರಿಯಾ ಜುಮ್ಮಾ ಮಸ್ಜಿದ್ ಮುಂಡಾಜೆ ಇದರ  ಖತೀಬ್ ಅಬ್ದುಲ್ ಹಮೀದ್ ದಾರಿಮಿ ದುವಾ ಮೂಲಕ ಚಾಲನೆ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಜಿ.ಕೆ ಮುಹಮ್ಮದ್ (ಪುತ್ತಾಕ), ಉಪಾಧ್ಯಕ್ಷ ಹಮೀದ್ ಹಾಜಿ ಕಲ್ಲಾಜೆ, ಪ್ರ. ಕಾರ್ಯದರ್ಶಿ, ಸಿವಿಲ್ ಗುತ್ತಿಗೆದಾರರ ಅಬ್ಬಾಸ್‌ ಕೆ.ಎಮ್,‌ ಜೊತೆ ಕಾರ್ಯದರ್ಶಿ ಇಸ್‌ಹಾಕ್ ಯು.ಎ, ಕೋಶಾಧಿಕಾರಿ ಹಂಝ ಬಿಎಮ್‌ಎ, ಆಡಳಿತ ಸಮಿತಿ ಸದಸ್ಯರಾದ ಸಿದ್ದಿಕ್ ಸಾಗರ್,‌ ಜಾಕಿರ್, ಜಿ.ಕೆ ಬಾವು, ಸದರ್ ಮುಅಲ್ಲಿಮ್ ಶೆರೀಫ್ ಮುಸ್ಲಿಯಾರ್ ಹಾಗು ಇನ್ನಿತರ ಗಣ್ಯರು ಅತಿಥಿಗಳಾಗಿದ್ದರು.



ಈ ಸಂದರ್ಭದಲ್ಲಿ, ಧಫನ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿರುವ ಇಬ್ರಾಹಿಂ ಕುಳೂರು, ಅಹಮದ್‌ಕುಂಞ ನೆಕ್ಕರೆ, ಅಹಮ್ಮದ್ ಕುಂಞಿ ಕುರುಡ್ಯ, ಯಾಕೂಬ್ ಕುಂಟಲ್ ಪಲ್ಕೆ, ಅಬೂಬಕ್ಕರ್ ಕುಳೂರು, ಉಸ್ಮಾನ್ ಕುರುಡ್ಯ ಇವರಿಗೆ ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಊರ ಪರ ಊರಿನ 54 ರಕ್ತದಾನಿಗಳು ರಕ್ತದಾನ ನೀಡಿದರು. ಕಾರ್ಯಕ್ರಮಕ್ಕೆ  ಕರೀಂ ಕೆ.ಎಸ್, ಅಬ್ದುಲ್ಲ ರೋಝ, ಕೆರೀಂ ಕೆ.ಎಸ್, ಶಬೀರ್, ಉಸ್ಮಾನ್ ಕೂಳೂರು, ಹಂಝ ಬಿ.ಎಂ.ಎ, ಆಸಿಫ್ ಪೋಲಿಸ್, ಲಕ್ಷ್ಮಣ ಪೋಲಿಸ್, ಮುಝಮ್ಮಿಲ್ ಇನ್ನಿತರ ಗಣ್ಯರು  ಶುಭ ಕೋರಿದರು.‌

ಹೆಲ್ಪ್ ಫಾರ್ ಸೋಮಂತ್ತಡ್ಕ ಇದರ ಅಡ್ಮಿನ್ ಗಳಾದ ಉಮರ್ ರೋಝ, ಸಾದಿಕ್, ಹುಸೈನ್ ರೋಝ, ರಶೀದ್ ಕೂಳೂರು, ಅಶ್ವೀರ್, ಮುನೀರ್, ಅಬ್ಬಾಸ್ ಅರೆಕ್ಕಲ್, ನೌಶಾದ್ ಬಿ.ಹೆಚ್, ಹಕೀಂ ಕುರುಡ್ಯ, ಫಾರೂಕ್ ನೆಕ್ಕರೆ ಇವರು ಕಾರ್ಯಕ್ರಮ ಸಂಯೋಜಿಸಿದರು. 

ಬ್ಲಡ್ ಹೆಲ್ಪ್‌ಲೈನ್  ಕರ್ನಾಟಕ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ರಕ್ತದಾನ ಶಿಬಿರ ಆಯೋಜಿಸಿದ ಸವಿನೆನಪಿಗೆ ಬ್ಲಡ್‌ ಹೆಲ್ಪ್‌ಲೈನ್ ಕರ್ನಾಟಕ ಇವರ ವತಿಯಿಂದ ಹೆಲ್ಪ್ ಫಾರ್ ಸೋಮಂತಡ್ಕದ ಆಯೋಜಕರಿಗೆ ಸ್ಮರಣಿಕ್ಕೆ ನೀಡಿ ಗೌರವಿಸಲಾಯಿತು.

ವರದಿ; ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment