Posts

ಕಳೆಂಜ ಕೆರೆಕೋಡಿಯಲ್ಲಿ‌‌ ಮೃತ ವೃದ್ದೆಗೆ ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ

1 min read

ಬೆಳ್ತಂಗಡಿ;  ಕಳೆಂಜ ಗ್ರಾಮದ ಕೆರೆಕೋಡಿ ಬಟ್ಯಾಲ್ ತ್ರೇಸ್ಯಾ ಇಲ್ಲಿಕ್ಕಲ್ (75ವ.) ಅವರು ಸ್ವಗೃಹದಲ್ಲಿ ರವಿವಾರ ಮೃತರಾಗಿದ್ದು, ಅವರ ಅಂತ್ಯಸಂಸ್ಕಾರ ವಿಧಿಗಳನ್ನು ರವಿವಾರ ಕೋವಿಡ್ ಸರಕಾರಿ ನಿಯಮಾನುಸಾರ  ಬಟ್ಯಾಲ್ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ನೆರವೇರಿಸಲಾಯಿತು.

ತಾ.‌ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ ಹಾಗೂ ಸೈಂಟ್ ಮೇರಿಸ್ ಚರ್ಚ್ ಬಟ್ಯಾಲ್ ಇಲ್ಲಿನ ಕೋವಿಡ್ ಕಾರ್ಯಪಡೆ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿತು.

ಚರ್ಚ್‌ನ ಧರ್ಮಗುರುಗಳಾದ ಫಾ. ಫ್ರಾನ್ಸಿಸ್ ಓಡಂಪಳ್ಳಿಲ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಕಾರ್ಯಪಡೆ ಸಂಯೋಜಕ ಫಾ. ಬಿನೋಯ್ ಎ.ಜೆ ಮತ್ತು ಫಾ. ಶಿಬಿ ಪುದಿಯೆರ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿ ನೆರವೇರಿಸಿದರು.


ಕಾರ್ಯಾರಣೆಯಲ್ಲಿ ಜಂಟಿ ಕಾರ್ಯಪಡೆ ಕಾರ್ಯಕರ್ತರಾದ ರಂಜಿತ್ ಅಮ್ಮಿನಡ್ಕ, ಜೈಸನ್ ಪಟ್ಟೇರಿಲ್, ಲಿಜೋ ಚಾಕೋ, ಥೋಮಸ್ ಪಿ.ಎ ಬಟ್ಯಾಲ್, ಅಜಿತ್‌ ಪಿ.ಎಮ್‌ ಗಂಡಿಬಾಗಿಲು,  ಮೃತ ತ್ರೇಸ್ಯಾ ಇಲ್ಲಿಕ್ಕಲ್ ಅವರ ಪುತ್ರ ಜೋಸ್ ಇಲಿಕಲ್,‌ಮೊಮ್ಮಗ ಸಾಂಜೋ ಇಲ್ಲಿಕ್ಕಲ್ ಇವರು ಭಾಗಿಯಾದರು.

ಮಾನವ ಸ್ಪಂದನ ತಂಡದ ಚೇರ್ಮೆನ್ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ‌, ಜೈಸನ್ ವೆರ್ಣೂರು ಅವರು ಈ ವೇಳೆ ಉಪಸ್ಥಿತರಿದ್ದರು. 

ಚರ್ಚ್‌ನ ಆಡಳಿತ ಸಮಿತಿಯ ಪ್ರಮುಖರಾದ ಪ್ರಶಾಂತ್ ಪಟ್ಟೇರಿಲ್, ಶಿಂಟೋ ತಟ್ಟಾರಶ್ಶೇರಿ, ಜೋಸ್ ನ್ಯಾರಕ್ಕ, ಸೆಬಾಸ್ಟಿಯನ್ ಪಿ.ಟಿ ಹಾಗೂ ಇತರರು ಭಾಗಿಯಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment