ಮಂಗಳೂರು: ಕರ್ನಾಟಕ ಸರಕಾರದ ವಕ್ಫ್ ಮಂಡಳಿಯಿಂದ ನೇಮಕಗೊಂಡಿದ್ದ ದ.ಕ ಜಿಲ್ಲಾ ಸಲಹಾ ಸಮಿತಿಯ ಅಧಿಕೃತ ಪದಗ್ರಹಣ ಆ.1 ರಂದು ಜರುಗಿತು.
ನೂತನ ಸಾಲಿನ ಅಧ್ಯಕ್ಷರಾಗಿ ನಿಯೋಜಿಸಲ್ಪಟ್ಟಿದ್ದ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ತಂಡದ ಎಲ್ಲಾ ಸದಸ್ಯರು ಸೋಮವಾರ ಅಧಿಕಾರ ವಹಿಸಿಕೊಂಡರು.
ಉಪಾಧ್ಯಕ್ಷ ಪಕೀರಬ್ಬ ಮರೋಡಿ, ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು
ಈ ಪೈಕಿ ಜಿಲ್ಲಾ ಉಪಾಧ್ಯಕ್ಷರಾಗಿ ನಿಯೋಜಿಸಲ್ಪಟ್ಟಿದ್ದ ಬೆಳ್ತಂಗಡಿ ತಾಲೂಕಿನ ಕಾಶಪಟ್ಣ ನಿವಾಸಿ ಉದ್ಯಮಿ ಪಕೀರಬ್ಬ ಮರೋಡಿ, ಸದಸ್ಯರಾಗಿ ಆಯ್ಕೆಯಾಗಿದ್ದ ಕಾಜೂರು ದರ್ಗಾಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಇವರೂ ಸೇರಿದಂತೆ ಉಳಿದ ನಿರ್ದೇಶಕರಾದ ಎ.ಕೆ. ಜಮಾಲ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಸದಸ್ಯರಾದ ಸಿರಾಜುದ್ದೀನ್, ಖಾಲಿದ್ ನಂದಾವರ, ಶಾಕೀರ್ ಕಣ್ಣೂರು, ಕಾರ್ಪೊರೇಟರ್ ಲತೀಫ್ ಕಂದಕ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮನ್ಸೂರ್ ಅಹ್ಮದ್ ಅಝಾದ್, ಹಾರಿಸ್ ಮರೈನ್, ಮುಹಮ್ಮದ್ ಕನ್ನಂಗಾರ್, ಹಾರಿಸ್ ಬೈಕಂಪಾಡಿ, ಬಿ.ಕೆ. ಹಿದಾಯತ್, ಮುನ್ನಾ ಕಮ್ಮರಡಿ ಉಪಸ್ಥಿತರಿದ್ದರು.ಈ ಹಿಂದೆಯೇ ನೇಮಕಾತಿ ಆದೇಶ ಬಿಡುಗಡೆಗೊಂಡಿದ್ದರೂ ಸರಕಾರವು ಈ ಆದೇಶಕ್ಕೆ ತಾತ್ಕಾಲಿಕವಾಗಿ ಆಡಳಿತಾತ್ಮಕ ತಡೆಯಾಜ್ಞೆ ನೀಡಿದ್ದ ಕಾರಣ ಈ ಪ್ರಕ್ರಿಯೆ ನಡೆದಿರಲಿಲ್ಲಿ. ಆದರೆ ಮತ್ತೆ ಇದೀಗ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ನಿಯೋಜಿತ ಇಡೀ ತಂಡ ಸೋಮವಾರ ಅಧಿಕಾರಬಪದ ಸ್ವೀಕರಿಸಿದರು.
ಬಾವುಟಗುಡ್ಡೆ ಈದ್ದಾ ಜುಮಾ ಮಸ್ಜಿದ್ ಖತೀಬ್ ಸ್ವದಖತುಲ್ಲಾ ನದ್ವಿ ದುಆಗೈದರು.
ವಕ್ಸ್ ಸಲಹಾ ಸಮಿತಿಯ ಸದಸ್ಯ ಸೈದುದ್ದೀನ್ ಸ್ವಾಗತಿಸಿದರು. ಅಶ್ರಫ್ ಕಿನಾರ ವಂದಿಸಿದರು.