Posts

ವೇಕ್ಸಿನ್ ಅವಾಂತರ ಆರೋಪ: ಕುಕ್ಕ ಗೌಡರಿಗೆ 5 ಲಕ್ಷ ರೂ.ಪರಿಹಾರ ದೊರಕಿಸಿಕೊಡುವಂತೆ ವಸಂತ ಬಂಗೇರ ಆಗ್ರಹ

1 min read

ಬೆಳ್ತಂಗಡಿ: ಕೋವಿಡ್ ಲಸಿಕೆಯ ಅವಾಂತರದಿಂದಾಗಿಯೇ ಪುದುವೆಟ್ಟುವಿನ ಕೃಷಿಕ ಕುಕ್ಕ ಗೌಡ (65)  ಅವರ ಆರೋಗ್ಯ ಸ್ಥಿತಿ ಹದಗೆಡಲು ಕಾರಣವಾಗಿದೆ. ವೇಕ್ಸಿನ್ ಗೆ ಹೋಗುವ ಮುನ್ನಾ ದಿನದ ವರೆಗೆ ಆರೋಗ್ಯದಿಂದಿದ್ದ ಅವರಿಗೆ ಕೋವಿಡ್ ಚುಚ್ಚುಮದ್ದು ನಿಂದಾಗಿಯೇ ಪ್ರತಿಕೂಲ ಆರೋಗ್ಯ  ಸಮಸ್ಯೆ ಎದುರಾಗಿದೆ. ಇದರ ಸಂಪೂರ್ಣ ಹೊಣೆಯನ್ನು ಆರೋಗ್ಯ ಇಲಾಖೆಯೇ ಹೊತ್ತುಕೊಂಡು ಸರಕಾರದಿಂದ ಐದು ಲಕ್ಣ ರೂ ಪರಿಹಾರ ದೊರಕಿಸಿಕೊಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದ್ದಾರೆ.

ಇದೀಗ ಕುಕ್ಕ ಗೌಡ ಅವರು ಹಠಾತ್ತಾಗಿ ಪ್ರಜ್ಞಾ ಹೀನರಾಗಿ ಈಗ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಾಗಿ ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು ಅವರನ್ನು ವಸಂತ ಬಂಗೇರ ಭೇಟಿ ಮಾಡಿದರು.

ಕಾಯಿಲೆಯೇ ಇಲ್ಲದ ವ್ಯಕ್ತಿ ಇದೀಗ ಪ್ರಜ್ಞಾಹೀನ;

ಯಾವುದೇ ಕಾಯಿಲೆಯಿಲ್ಲದೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಆರೋಗ್ಯವಂತ ಕುಕ್ಕ ಗೌಡರನ್ನು ಆರೋಗ್ಯ ಇಲಾಖೆ ಲಸಿಕೆ ಪಡೆಯಲು ಒತ್ತಾಯಿಸಿದ್ದು, ಇಲ್ಲದಿದ್ದರೆ ಪಡಿತರ ಕಾರ್ಡ್ ರದ್ದು ಪಡಿಸಿ ಎಲ್ಲ ಸೌಲಭ್ಯ ಕಡಿತಗೊಳಿಸಲಾಗುವುದೆಂಬ ಬೆದರಿಕೆಯೊಡ್ಡಿ ನೆರಿಯದಲ್ಲಿ ಒತ್ತಾಯಪೂರ್ವಕವಾಗಿ ಲಸಿಕೆ ನೀಡಿದೆ.

ತತ್ಪರಿಣಾಮವಾಗಿ ದೇಹದ ಎಡ ಭಾಗ ಪಾರ್ಶ್ವವಾಯು ಪೀಡಿತರಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದಾರೆ. ಪ್ರಾರಂಭದಲ್ಲಿ ಲಸಿಕೆಯ ಎಡವಟ್ಟಿನಿಂದಾದ ಪ್ರಕರಣ ಎಂದು ತಿಳಿಸಿದ ವೈದ್ಯರು ಬಳಿಕ ಹೇಳಿಕೆಯನ್ನು ತಿರುವಿದ್ದಾರೆ. 3 ತಿಂಗಳ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಒಂದು ವಾರ ಚಿಕಿತ್ಸೆ ಪಡೆದು ಅಲ್ಪ ಗುಣಮುಖರಾದ ಅವರನ್ನು ಮನೆಗೆ ತಂದ ಕೆಲವೇ ದಿನಗಳಲ್ಲಿ ಮತ್ತೆ ಪ್ರಜ್ಞಾಹೀನರಾಗಿ ಉಜಿರೆಯ ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದರು.

ಪ್ಲಾಸ್ಟಿಕ್ ಬೆಡ್ ಭರವಸೆ ಪೊಳ್ಳು;

ವಿಚಾರ ಅರಿತು ಕುಕ್ಕ ಗೌಡರ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು ಅವರು ಕುಕ್ಕ ಗೌಡರಿಗೆ ಪ್ಲಾಸ್ಟಿಕ್ ಬೆಡ್ ಕಳಿಸಿ ಕೊಡುವುದಾಗಿ ಭರವಸೆ ನೀಡಿ ತೆರಳಿದವರು ಮತ್ತೆ ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ವಸಂತ ಬಂಗೇರ ಆರೋಪಿಸಿದರು. 

ಜಿಲ್ಲಾ ಆರೋಗ್ಯಾಧಿಕಾರಿಗಳು ಅವರ ಆರೋಗ್ಯ ವಿಚಾರಿಸುವ ಮಾನವೀಯತೆ ತೋರಲಿಲ್ಲ. ಇದೀಗ ಕುಕ್ಕ‌ಗೌಡರ ಪುತ್ರ ತಂದೆಯ ಅನಾರೋಗ್ಯದಿಂದಾಗಿ ದೂರದ ಊರಿನಿಂದ ಉದ್ಯೋಗ ತೊರೆದು ಆಗಮಿಸಿದ್ದು, ಕಳೆದ 3 ತಿಂಗಳಿನಿಂದ ತಂದೆಯ ಆರೈಕೆಯಲ್ಲಿದ್ದಾರೆ. ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಕುಟುಂಬ ವರ್ಗ ಈಗಾಗಲೇ ರೂ.2ಲಕ್ಷಕ್ಕೂ ಹೆಚ್ಚು ವ್ಯಯಿಸಿದ್ದಾರೆ. ಸರಕಾರದ ಬೇಜವಾಬ್ಧಾರಿ ಲಸಿಕೆ ಎಡವಟ್ಟಿನಿಂದ ತಾಲೂಕಿನಲ್ಲಿ 5 ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು ಇದು ಮೂರನೇ ಪ್ರಕರಣವಾಗಿದೆ. ಈ ತಪ್ಪಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಡಿಹೆಚ್‌ಒ ಕಚೇರಿ ಮುಂದೆ ಪ್ರತಿಭಟನೆ;

ಕುಕ್ಕ ಗೌಡರ ಘಟನೆಯನ್ನು ಮಾಧ್ಯಮ‌ಗೋಷ್ಠಿ ಮೂಲಕ ಬಹಿರಂಗಪಡಿಸಿದರೂ ಆರೋಗ್ಯ ಇಲಾಖೆ ಮೌನವಹಿಸಿದೆ. ಇನ್ನಾದರೂ 

ಸ್ಪಂದಿಸದಿದ್ದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು  ವಸಂತ ಬಂಗೇರ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕುಕ್ಕ ಗೌಡರ ಮಗ ರಮೇಶ್ ಜೊತೆಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment