ಬೆಳ್ತಂಗಡಿ; ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಮೂರೂ ಕಡೆಯಿಂದ ಬಾಗಿಲು ತೆರೆದಿಟ್ಟು ಹೋಗಿದ್ದ ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಯಿಂದ ಮೂರು ಗ್ರಾಂ ಚಿನ್ನವನ್ನು ಕಳ್ಳರು ಕಳವುಗೈದಿದ್ದಾರೆ.
ಕಾಯರ್ತಡ್ಕ ಕೆಳಗಿನ ನಡುಜಾರು ಸಿಬು ಎಂಬವರ ಮನೆಯಲ್ಲಿ ಡಿ.25ರಂದು ಹಾಡಹಗಲೇ ಘಟನೆ ನಡೆದಿದೆ.
ಮನೆಯ ಯಜಮಾನ ನೀಡಿದ ದೂರಿನಲ್ಲಿ ಬೆಳಿಗ್ಗೆ 11.30ರಿಂದ ಸಂಜೆ 5 ಗಂಟೆಯ ನಡುವೆ ನಾವು ಪುದುವೆಟ್ಟಿನಲ್ಲಿ ನಡೆದ ವಿವಾಹ ಸಮಾರಂಭಕ್ಕಾಗಿ ಹೋಗಿದ್ದ ವೇಳೆ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಆದರೆ ಲಭ್ಯ ಮಾಹಿತಿ ಪ್ರಕಾರ ಸ್ಥಳೀಯ ಬಾರ್‌ಗೆ ಬಂದಿರುವವರ್ಯಾರೋ ಮನೆಯ ಮೂರೂ ಕಡೆ ಬಾಗಿಲು ತೆರೆದಿರುವುದನ್ನು ಗಮನಿಸಿ ಈ ಕೃತ್ಯವೆಸಗಿರಬಹುದು ಎಂದು ಹೇಳಲಾಗಿದೆ.
ಧರ್ಮಸ್ಥಳ ಠಾಣೆ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿ ಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.