ಬೆಳ್ತಂಗಡಿ; ತಾಲೂಕಿನ ತೆಕ್ಕಾರು ಎಂಬಲ್ಲಿ ವಿದ್ಯುತ್ ಸಂಪರ್ಕದ ಲೋಪವನ್ನು ಸರಿಪಡಿಸಲು ಹೋಗಿದ್ದ ಮೆಸ್ಕಾಂ ಪವರ್ ಮ್ಯಾನ್ ಒಬ್ಬರು ವಿದ್ಯುದಾಘಾತಕ್ಕೆ ತುತ್ತಾಗಿ ದಾರುಣವಾಗಿ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಮೃತರನ್ನಿ ವಿಕಾಸ್ (26ವ.) ಎಂಬವರೆಂದು ಗುರುತಿಸಲಾಗಿದೆ. ಮೃತ ವಿಕಾಸ್ ಬಿಜಾಪುರ ನಿವಾಸಿಯಾಗಿದ್ದು ಕಳೆದ 5 ವರ್ಷಗಳಿಂದ ಮೆಸ್ಕಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿವಾಹಿತರಾಗಿರುವ ಇವರಿಗೆ ಒಂದುವರೆ ವರ್ಷ ಪ್ರಾಯದ ಮಗು ಕೂಡ ಇದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಘಟನೆಗೆ ಯಾರ ನಿರ್ಲಕ್ಷ್ಯ ಕಾರಣ ಎಂಬುದು ತಿಳಿದುಬರಬೇಕಿದೆ.