Posts

ಮುಂದಿನ ವರ್ಷ ಗಾಂಧಿ ಪ್ರತಿಮೆಯೊಂದಿಗೆ ಈ‌ ಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆ; ಶಾಸಕ ಹರೀಶ್ ಪೂಂಜ ವಿಶ್ವಾಸ ಮುಂಡಾಜೆಯಲ್ಲಿ "ಶಾಂತಿವನ- ಮಹಾತ್ಮಾ ಗಾಂಧಿ ಕಟ್ಟೆ" ನಾಮಫಲಕ ಅನಾವರಣ

1 min read


ಬೆಳ್ತಂಗಡಿ; ಊರಿನ ಹಿರಿಯರ ಚಿಂತನೆಯಿಂದ ಇಲ್ಲಿ ನೆಡಲಾಗಿರುವ ಆಲದ ಮರದ ಈ ಪ್ರದೇಶ ಅಭಿವೃದ್ಧಿಯಾಗಬೇಕೆಂಬುದು ಗ್ರಾಮ ಪಂಚಾಯತ್ ನ  ಮಹತ್ವಾಕಾಂಕ್ಷೆಯ ಕಲ್ಪನೆ. ಆ ನಿಟ್ಟಿನಲ್ಲಿ ಇದಕ್ಕೆ ಇಂಟರ್‌ಲಾಕ್ ಅಳವಡಿಕೆ, ಕಟ್ಟೆ ನಿರ್ಮಾಣ,  ಮುಂದಿನ ವರ್ಷ ಗಾಂಧಿ ಪ್ರತಿಮೆಯೊಂದಿಗೆ ಇಲ್ಲಿ ಗಾಂಧಿ ಜಯಂತಿ ಆಚರಿಸುವಂತೆ ಮಾಡೋಣ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು.

73 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮ ಹಾಕಿ ನೆಡಲಾಗಿರುವ ಆಲದ ಮರದ ಜಾಗದಲ್ಲಿ ಗ್ರಾಮ ಪಂಚಾಯತ್ ಮುಂಡಾಜೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಮಫಲಕ ಅನಾವರಣಗೊಳಿಸಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ರಂಜಿನಿ ವಹಿಸಿದ್ದರು. ಶಿಕ್ಷಕ ಅರವಿಂದ ಚೊಕ್ಕಾಡಿ ಸಂದೇಶ ಭಾಷಣ ಮಾಡಿದರು. 

ಸಮಾರಂಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ದಿಶಾ ಪಟವರ್ಧನ್, ಸದಸ್ಯರಾದ ಅಗರಿ ರಾಮಣ್ಣ ಶೆಟ್ಟಿ, ಎಂ. ವಿಶ್ವನಾಥ ಶೆಟ್ಟಿ, ಗಣೇಶ್ ಬಂಗೇರ, ರವಿಕುಮಾರ್ ನೆಯ್ಯಾಲು, ಜಗದೀಶ್ ನಾಯ್ಕ, ಸುಮಲತಾ, ಯಶೋಧಾ, ಅಶ್ವಿನಿ ಮತ್ತು ವಿಮಲಾ, ಸದ್ರಿ ಜಾಗ ದಾನ ನೀಡಿದ ಗೋವಿಂದ ಮನ್ಮಥ ಮರಾಠೆ ಅವರ ಪುತ್ರ ರವೀಂದ್ರ ಮರಾಠೆ, ಊರ ಹಿರಿಯರಾದ ಅಡೂರು ವೆಂಕಟ್ರಾಯ, ಗಾಂಧಿ ವಿಚಾರ ವೇದಿಕೆ ಮಾತೃ ಸಮಿತಿ ಅಧ್ಯಕ್ಷ ಶ್ರೀಧರ ಜಿ ಭಿಡೆ, ಮಿಲ್ಕ್ ಸೊಸೈಟಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಸಂಚಾಲಕ  ನಾರಾಯಣ ಗೌಡ ಕೊಳಂಬೆ, ಮಾಜಿ ಸೈನಿಕ ಕಾಂಚೋಡು ಗೋಪಾಲಕೃಷ್ಣ ಭಟ್, ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಪ್ರಹ್ಲಾದ್ ಫಡ್ಕೆ, ಪರಶುರಾಮ ದೇವಸ್ಥಾನದ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ಮುಂಡಾಜೆ ಪ.ಪೂ ಕಾಲೇಜು ಪ್ರಾಂಶುಪಾಲೆ ಜ್ವಾಲಿ ಡಿಸೋಜಾ, ಮುಂಡಾಜೆ ಸಹಕಾರಿ ಸಂಘದ ಸಿಇಒ ನಾರಾಯಣ ಫಡ್ಕೆ, ಜಿ.ಪಂ ಮಾಜಿ ಸದಸ್ಯ ಕೊರಗಪ್ಪ ನಾಯ್ಕ,  ಮುಂಡಾಜೆ ರೋಟರಿ ಸಮುದಾಯದಳದ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಹಾಗೂ ವಿಠಲ ರಾವ್ ಸಂಪಿಗೆ, ಅರೆಕ್ಕಲ್ ರಾಮಚಂದ್ರ ಭಟ್,  ಅನಂತ ರಾವ್ ಚಾರ್ಮಾಡಿ, ವಿಶ್ವನಾಥ ಬೆಂಡೆ, ನಾಗಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. 

ಗ್ರಾ.ಪಂ ಪಿಡಿಒ ಸುಮಾ ಎ.ಎಸ್ ಪ್ರಸ್ತಾಪಿಸಿ ಸ್ವಾಗತಿಸಿದರು.

ಸಮಾರಂಭದ ಬಳಿಕ ರೋಟರಿ ಸಮುದಾಯ ದಳ, ಮುಂಡಾಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ಗ್ರಾ.ಪಂ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ, ಸ್ವಚ್ಚತಾ ಮ್ಯಾರಥಾನ್ ನಡೆಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment