Posts

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಳ್ತಂಗಡಿ ತಾಲೂಕು ಶಾಖೆ ಪ್ರಥಮ ಮಹಾಸಭೆ:ನೂತನ ಪದಾಧಿಕಾರಿಗಳ ಆಯ್ಕೆ

1 min read

ಬೆಳ್ತಂಗಡಿ: ನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಪ್ರಥಮ ಮಹಾಸಭೆ ಡಿ.20 ರಂದು ನಡೆಯಿತು.  

ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಮತ್ತು ಜಿಲ್ಲಾ ಸದಸ್ಯ ರವೀಂದ್ರ ವೀಕ್ಷಕರಾಗಿ ಭಾಗವಹಿಸಿದ್ದರು.

ವಿನಾಯಕ್ ರಾವ್ ಕನ್ಯಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ  ಜಾನ್ ಅರ್ವಿನ್ ಡಿಸೋಜ ಪ್ರಸ್ತಾವನೆಗೈದರು. ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಯತೀಶ್ ಬೈಕಂಪಾಡಿ ಸಂಸ್ಥೆಯ ಧ್ಯೇಯ, ಉದ್ದೇಶ ಹಾಗೂ ಕರ್ತವ್ಯಗಳನ್ನು ಸದಸ್ಯರಿಗೆ ತಿಳಿಸಿದರು.

ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ರವೀಂದ್ರ ಸಂಸ್ಥೆಯ ನಿಯಮಾವಳಿಗಳ ಬಗ್ಗೆ ವಿವರಿಸಿದರು.  

ಈ ವೇಳೆ ಮುಂದಿನ‌ ಪದಾಧಿಕಾರಿಗಳನ್ನು ಆರಿಸಲಾಯಿತು,  ಬೆಳ್ತಂಗಡಿ ತಾಲೂಕು ಶಾಖೆಗೆ ಅಧ್ಯಕ್ಷರಾಗಿ ತಹಶೀಲ್ದಾರ್ ಬೆಳ್ತಂಗಡಿ, ಚೇರ್ಮನ್ ಆಗಿ ಹರಿದಾಸ್ ಎಸ್. ಎಂ.,‌ಪ್ರಧಾನ  ಕಾರ್ಯದರ್ಶಿಯಾಗಿ ಯಶವಂತ ಪಟವರ್ಧನ್‌, ವೈಸ್ ಚೇರ್ಮನ್ ಆಗಿ ಜಾನ್ ಅರ್ವಿನ್ ಡಿಸೋಜ, ಹಾಗೂ ಕೋಶಾಧಿಕಾರಿಯಾಗಿ ಚಂದ್ರಕಾಂತ ಕಾಮತ್‌ ಅವರನ್ನು ಆರಿಸಲಾಯಿತು.

‌ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಬಿ ಯಶೋವರ್ಮ, ಡಾ.‌ಪ್ರಮೋದ್ ಆರ್ ನಾಯ್ಕ್, ಶಿವಕುಮಾರ್ ಎಸ್.ಎಂ, ವಿನಾಯಕ್ ರಾವ್ ಕನ್ಯಾಡಿ, ರಾಮಚಂದ್ರ ಶೆಣೈ, ಡಾ.‌ಶಿವಾನಂದ ಸ್ವಾಮಿ, ಡಾ.‌ಶ್ರೀ ಹರಿ, ಸುಜಿತ್ ರಾವ್ ಉಜಿರೆ, ಸುಕನ್ಯಾ ಹೆಚ್, ಪರಿಮಳ ಎಂ.ವಿ, ಆಶಾ ಸುಜಿತ್, ಸಂಜೀವ, ಕೃಷ್ಣಪ್ಪ‌ಗುಡಿಗಾರ, ಹೈದರ್ ಮರ್ದಾಳ, ಎಂ.ಶರೀಫ್ ಬೆರ್ಕಳ ಇವರು ಆಯ್ಕೆಯಾದರು.

ನೂತನ ಕಾರ್ಯದರ್ಶಿ ಯಶವಂತ ಪಟವರ್ಧನ್ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment