ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳಾದ ನಾರಾಯಣ ಗೌಡ ದೇವಸ್ಯ, ರಾಮ ಆಚಾರಿ, ಆನಂದ ನಾಯ್ಕ, ಸಾಂತಪ್ಪ ಪೂಜಾರಿ ಮತ್ತು ನಾಗರಾಜ ನಾಯ್ಕ ಅವರು ಕಾಜೂರು ಪ್ರಧಾನ ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್ ಅವರನ್ನು ಅವರ ಮುಂಡಾಜೆ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಸ್ಥಳೀಯ ಮುಖಂಡರಾದ ನಾಮದೇವ ರಾವ್, ಅಬ್ದುಲ್ ಹಮೀದ್ ನೆಕ್ಕರೆ, ರೋಶನ್ ಸೆಬಾಸ್ಟಿಯನ್ ಇವರು ಉಪಸ್ಥಿತರಿದ್ದರು.
ಈ ಸಂದರ್ಭ ಅಭ್ಯರ್ಥಿಗಳ ಜೊತೆ ಕಣದಲ್ಲಿರುವ ಇತರ 6 ಮಂದಿ ಮಹಿಳಾ ಅಭ್ಯರ್ಥಿಗಳಿಗೂ ಧರ್ಮ ಗುರುಗಳು ಗೆಲುವಿಗಾಗಿ ಹಾರೈಸಿದರು.