Posts

ಶ್ರೀ ದೇವಿ ಸ್ವಸಹಾಯ ಸದಸ್ಯೆ ಕೇಶವತಿ ಅವರಿಗೆ 'ಸಿಡ್ಬಿ ಸಮೃದ್ದಿ' ಯಡಿ 5 ಲಕ್ಷ ರೂ.ಗಳ ಸಾಲದ ಚೆಕ್ ವಿತರಣೆ

ಬೆಳ್ತಂಗಡಿ: ಸಿಡ್ಬಿ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ವತಿಯಿಂದ ಸ್ವ ಉದ್ಯೋಗಕ್ಕೆ ಪೂರಕವಾಗಿ "ಸಿಡ್ಬಿ ಸಮೃದ್ಧಿ ಯೋಜನೆ" ಯಡಿ ನೀಡಲಾಗುವ 5 ಲಕ್ಷ ಸಾಲದ ನೆರವಿನ ಚೆಕ್ ಅನ್ನು ಮಡಂತ್ಯಾರು ವಲಯ ಕುಕ್ಕಳ ಒಕ್ಕೂಟ ವ್ಯಾಪ್ತಿಯ 'ಶ್ರೀದೇವಿ ಸ್ವ ಸಹಾಯ ಸಂಘದ  ಕೇಶವತಿ ಅವರಿಗೆ ತಾಲೂಕಿನ ಯೋಜನಾಧಿಕಾರಿ ಯಶವಂತ್ ಎಸ್ ಇವರು ವಿತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಆದಿತ್ಯಾ, ಒಕ್ಕೂಟದ ಅಧ್ಯಕ್ಷ ಕೋಟ್ಯಪ್ಪ ಪೂಜಾರಿ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ  ಮೊದಲಾದವರು ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಸತೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. 

ಟಯರ್ ಅಂಗಡಿ ಮಾಲಕ   ಸುನಿಲ್, ಕೇಶವತಿ ದಂಪತಿ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official