ಬೆಳ್ತಂಗಡಿ: ಇಲ್ಲಿನ ಬಂಗಾಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ಮತ್ತು ಸ್ಕೂಟರ್ ಅಪಘಾತವಾಗಿದ್ದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಕಿಲ್ಲೂರಿನ ಕರಿಯು ಮನೆಯ ಜನಾರ್ದನ ಗೌಡ ಅವರ ಪುತ್ರ ಗೋಪಾಲಕೃಷ್ಣ(19ವ.) ಎಂಬವರೆಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಬೆಳ್ತಂಗಡಿಯ ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ ಪ್ರತಿಶಾ ಅವರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕಿಲ್ಲೂರು ಕಡೆಯಿಂದ ಲಾಯಿಲ ಬರುತ್ತಿದ್ದ ಗೋಪಾಲಕೃಷ್ಣ ಎಂಬವರ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರಿಗೂ ಗಾಯಗಳಾಗಿದ್ದು ಈ ಪೈಕಿ ಗೋಪಾಲಕೃಷ್ಣ ಅವರನ್ನು ಆಸ್ಪತ್ರೆಗೆ ಸಾಹಿಸುವ ಮಧ್ಯೆ ಅವರು ಅಸುನೀಗಿದ್ದಾರೆ.