Posts

ಬೆಳ್ತಂಗಡಿಯಲ್ಲಿ ಬೇನರ್ ಕಟ್ಟುವಾಗ ವಿದ್ಯುತ್ ಲೈನ್ ಸ್ಪರ್ಶಿಸಿ ಅವಘಡ:: ಓರ್ವ ಸಾವು; ಮತ್ತೋರ್ವ ಗಂಭೀರ

1 min read


ಬೆಳ್ತಂಗಡಿ; ಕಾರ್ಯಕ್ರಮವೊಂದರ ಪೂರ್ವ ಪ್ರಚಾರಾರ್ಥ ಬೆಳ್ತಂಗಡಿ ನಗರದಲ್ಲಿ ಅಳವಡಿಸುವ ಸಲುವಾಗಿ ಫ್ಲೆಕ್ಸ್ ಬ್ಯಾನರೊಂದನ್ನು ವಾಹನದಲ್ಲಿ ಇಳಿಸುತ್ತಿದ್ದ ವೇಳೆ ಅಚಾನಕ್ಕಾಗಿ ಬ್ಯಾನರ್ ‌ನ ಕಬ್ಬಿಣದ ಫ್ರೇಂ ವಿದ್ಯುತ್ ಲೈನಿಗೆ ಸ್ಪರ್ಶಿಸಿ ನಡೆದ ಅವಘಡದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಬೆಳ್ತಂಗಡಿ ನಗರದಲ್ಲಿ ನಡೆದಿದೆ.

ಮೃತರನ್ನು ಟೆಂಪೋ ಚಾಲಕ,  ಬೆಳ್ತಂಗಡಿ ಸಂಜಯನಗರ ನಿವಾಸಿ ಪ್ರಶಾಂತ್ ಆಚಾರ್ಯ (40) ಎಬವರೆಂದು ಗುರುತಿಸಲಾಗಿದೆ. ಗಾಯಾಳುವನ್ನು ಬೆಳ್ತಂಗಡಿ ಪೂಂಜಶ್ರೀ ಮುದ್ರಣಾಲಯದ ಸಿಬ್ಬಂದಿ, ಮಲೆಬೆಟ್ಟು ನಿವಾಸಿ ಸತೀಶ್(25)  ಎಂಬವರೆಂದು ತಿಳಿದುಬಂದಿದೆ.

ಭಾರತೀಯ ಮಜ್ದೂರು ಸಂಘ ದ.ಕ ಮತ್ತು ಉಡುಪಿ‌ ಜಿಲ್ಲೆ ನೇತೃತ್ವದಲ್ಲಿ  ನ.13 ರಂದು ಮಂಗಳೂರಿನ ಮಣ್ಣಗುಡ್ಡೆ ಸಂಘ ನಿಕೇತನದಲ್ಲಿ ನಡೆಯಲಿರುವ 'ಕುಟುಂಬ ಮಿಲನ- 2022' ಕಾರ್ಯಕ್ರಮದ ಪೂರ್ವ ಪ್ರಚಾರಾರ್ಥ ಬ್ಯಾನರ್ ಅಳವಡಿಸುವ ತಯಾರಿಯಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಅವಘಡ ನಡೆದ ತಕ್ಷಣ ಸಾರ್ವಜನಿಕರ ನೆರವಿನೊಂದಿಗೆ ಇಬ್ಬರೂ ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ದಾರಿ ಮಧ್ಯೆ ಪ್ರಶಾಂತ್ ಕೊನೆಯುಸಿರೆಳೆದಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಘಟನೆಯ ವಿವರ ತಿಳಿಯುತ್ತಿದ್ದಂತೆ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ,‌ ಮಾಜಿ ಶಾಸಕ ವಸಂತ ಬಂಗೇರ ಅವರು ಭೇಟಿ‌ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಘಟನೆ ಬಗ್ಗೆ ಮಾಹಿತಿ‌ ತಿಳಿದು ನೂರಾರು ಮಂದಿ ಆಸ್ಪತ್ರೆಯ ವಠಾರದಲ್ಲಿ‌ ಜಮಾಯಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment