Posts

ಮುಂಡಾಜೆ ಅಂಚೆ ಕಚೇರಿ: ನಿವೃತ ನೌಕರ ಹೆಚ್. ಕೃಷ್ಣಪ್ಪ ಪೂಜಾರಿ ಅವರಿಗೆ ಬೀಳ್ಕೊಡುಗೆ

1 min read

ಬೆಳ್ತಂಗಡಿ: ಮುಂಡಾಜೆ ಅಂಚೆ ಕಚೇರಿಯಲ್ಲಿ ಗ್ರಾಮೀಣ ಡಾಕ್ ಸೇವಾ ಮೈಲ್ ಡೆಲಿವರರ್(ಜಿಡಿಎಸ್‌ಎಂಡಿ) ಯಾಗಿ ಸುದೀರ್ಘ 42 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ಡಿ. 24 ರಂದು ವೃತ್ತಿಯಿಂದ ನಿವೃತರಾದ ಹೆಚ್. ಕೃಷ್ಣಪ್ಪ ಪೂಜಾರಿ ಅವರಿಗೆ ಮುಂಡಾಜೆ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಶಾಖೆಗಳಲ್ಲಿ ಸಹೋದ್ಯೋಗಿಗಳಾಗಿದ್ದವರ ವತಿಯಿಂದ ಬೀಳ್ಕೊಡುಗೆಯು ಜರುಗಿತು.

ಅಂಚೆ ಇಲಾಖೆಯ ಇನ್ಸ್‌ಪೆಕ್ಟರ್ ಆಫ್ ಪೋಸ್ಟ್ ಸುಜಯ್ ಸಿ., ಮೈಲ್ ಓವರ್‌ಸೀಯರ್ ಧನಂಜಯ, ಜಮ್ಮುವಿನಲ್ಲಿ ಸೇನಾ ನೆಲೆಯಲ್ಲಿ ಅಂಚೆ ಇಲಾಖೆ ಗುಮಾಸ್ತರಾಗಿರುವ ತಿಮ್ಮಪ್ಪ, ಮುಂಡಾಜೆ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಆಗಿರುವ ಧನಂಜಯ, ಪೋಸ್ಟಲ್ ಅಸಿಸ್ಟೆಂಟ್ ಶೈಲಶ್ರೀ, ಶಾಖೆಗಳಾದ ಕಕ್ಕಿಂಜೆಯಿಂದ ಸಂತೋಷ್ ಮತ್ತು ಶೋಭಾ, ಗಂಡಿಬಾಗಿಲಿನಿಂದ ಸುರೇಶ್, ಚಾರ್ಮಾಡಿಯಿಂದ ಸುಶೀಲಾ, ಕಲ್ಮಂಜದಿಂದ ಪ್ರಕಾಶ್, ನೆರಿಯದಿಂದ ಎಲ್ಯಣ್ಣ ಗೌಡ, ಕಡಿರುದ್ಯಾವರದಿಂದ ಚೆನ್ನಕೇಶವ ಪ್ರಭು ಮತ್ತು ಉಮೇಶ್, ಉಜಿರೆ ಎಸ್‌ಡಿಎಂ ಪೋಸ್ಟ್‌ಮಾಸ್ಟರ್ ಕೃಷ್ಣಪ್ಪ ಮೊದಲಾದವರು ಭಾಗಿಯಾಗಿದ್ದರು. 

ಈ ಸಂದರ್ಭ ನಿವೃತರಾದ ಹೆಚ್.ಕೃಷ್ಣಪ್ಪ ಪೂಜಾರಿ ಅವರ ಸೇವಾ ಕಾರ್ಯವನ್ನು ನೆನೆದು ಅಭಿನಂದನೆ ಸಲ್ಲಿಸಿ ಕೃಷ್ಣಪ್ಪ ಪೂಜಾರಿ ಮತ್ತು ಮಾಲತಿ ದಂಪತಿಯನ್ನು ಗೌರವಾರ್ಪಣೆಯೊಂದಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment